×
Ad

ಬೆಳ್ತಂಗಡಿ: ಶಂಕಿತ ಡೆಂಗ್‌ಗೆ ಇನ್ನೊಂದು ಮೃತ್ಯು

Update: 2016-06-11 20:53 IST

ಬೆಳ್ತಂಗಡಿ, ಜೂ.11: ಶಂಕಿತ ಡೆಂಗ್ ಜ್ವರಕ್ಕೆ ಇಂದಬೆಟ್ಟು ಗ್ರಾಮದ ಶೇಕಬ್ಬ ಎಂಬವರ ಪತ್ನಿ ಅವ್ವಮ್ಮ (55) ಎಂಬವರು ಮೃತಪಟ್ಟಿದ್ದಾರೆ.

ಅವರಿಗೆ ಕೆಲದಿನಗಳ ಹಿಂದೆ ಜ್ವರ ಕಾಣಿಸಿಕೊಂಡ ಕಾರಣ ಉಜಿರೆ ಆಸ್ಪತ್ರೆಗೆ ದಾಖಲಾಗಿದ್ದರು. ಜ್ವರ ತಹಬದಿಗೆ ಬರದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆಗೆ ಸ್ಪಂದಿಸದ ಕಾರಣ ಅವರು ಶನಿವಾರ ಮೃತಪಟ್ಟಿದ್ದಾರೆ. ಮೃತರು ಪತ್ನಿ ಓರ್ವ ಪುತ್ರ ಹಾಗು ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News