ರಾಜ್ಯಸಭಾ ಚುನಾವಣೆ 9 ಮುಖ್ಯಾಂಶಗಳು

Update: 2016-06-11 17:48 GMT

ಹೊಸದಿಲ್ಲಿ, ಜೂ.11: ಏಳು ರಾಜ್ಯಗಳಲ್ಲಿ 27 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆದಿದೆ. ಇತರ ಎಂಟು ರಾಜ್ಯಗಳಲ್ಲಿ ಈಗಾಗಲೇ 30 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ.
ಬಿಜೆಪಿ ಹರ್ಯಾಣದಲ್ಲಿ ಅಚ್ಚರಿಯ ಜಯ ದಾಖಲಿಸಿದೆ. ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಾಲ್ ಉತ್ತರ ಪ್ರದೇಶದಲ್ಲಿ ಜಯ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
  1.ರಾಜ್ಯಸಭೆಯಲ್ಲಿ ಬಹುಮತ ಕೊರತೆ ಎದುರಿಸುತ್ತಿರುವ ಬಿಜೆಪಿ ಕೆಲವು ಸ್ಥಾನಗಳಿಗೆ ಪಕ್ಷೇತರ ಅಭ್ಯರ್ಥಿಗಳನ್ನು ಬೆಂಬಲಿಸಿತ್ತು. ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆಲ್ಲದಂತೆ ತಡೆಯುವುದು ಇದರ ಉದ್ದೇಶವಾಗಿತ್ತು. ಕೆಲವು ರಾಜ್ಯಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಇತರ ಪಕ್ಷಗಳಿಂದ ಸ್ಥಾನಗಳನ್ನು ಬಿಜೆಪಿ ಕಿತ್ತುಕೊಂಡಿತ್ತು.
2. ಆರು ಸಚಿವರುಗಳು ರಾಜ್ಯಸಭೆಗೆ ಪುನರಾಯ್ಕೆ ಬಯಸಿದ್ದರು. ಬಿಜೆಪಿ ರಾಜ್ಯಸಭೆಯಲ್ಲಿ ಸ್ಥಾನಗಳನ್ನು ಏರಿಸಿಕೊಂಡಿದೆ.ಆದರೆ ಅದು ಅತ್ಯಂತ ಹೆಚ್ಚು ಬಹುಮತ ಪಡೆದಿರುವ ಪಕ್ಷವಲ್ಲ.
  3. ಮಾಜಿ ಸಚಿವ ಕಪಿಲ್ ಸಿಬಾಲ್ ಉತ್ತರ ಪ್ರದೇಶದಿಂದ ಮತ್ತೊಮ್ಮೆ ರಾಜ್ಯಸಭೆ ಪ್ರವೇಶಿಸಿದ್ದಾರೆ. ಇಲ್ಲಿ 11 ಸ್ಥಾನಗಳಲ್ಲಿ ಸಮಾಜವಾದಿ ಪಾರ್ಟಿ 7 ಸ್ಥಾನ, ಬಿಎಸ್‌ಪಿ 2, ಬಿಜೆಪಿ ಮತ್ತು ಕಾಂಗ್ರೆಸ್ ತಲಾ 1 ಸ್ಥಾನಗಳನ್ನು ಜಯಿಸಿತ್ತು.
4.ಕರ್ನಾಟಕದಲ್ಲಿ ಕೇಂದ್ರ ಸಚಿವೆ ಬಿಜೆಪಿ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್‌ನ ಆಸ್ಕರ್ ಫೆರ್ನಾಂಡಿಸ್, ಜೈರಾಮ್ ರಮೇಶ್ ಮತ್ತು ಕೆ.ಸಿ. ರಾಮಮೂರ್ತಿ ಜಯ ಗಳಿಸಿದ್ದಾರೆ. ಆದರೆ ಜೆಡಿಎಸ್‌ನ ಅಭ್ಯರ್ಥಿ ಬಿ.ಎಂ.ಫಾರೂಕ್‌ಗೆ ಗೆಲ್ಲಲು ಸಾಧ್ಯವಾಗಿಲ್ಲ.
5. ರಾಜಸ್ಥಾನದಲ್ಲಿ ನಾಲ್ಕು ಸ್ಥಾನಗಳನ್ನು ಬಿಜೆಪಿ ಬಾಚಿಕೊಂಡಿದೆ. ಜಯ ಗಳಿಸಿದ ಬಿಜೆಪಿ ಅಧ್ಯರ್ಥಿಗಳಲ್ಲಿ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಮತ್ತು ಒ.ಪಿ. ಮಾಥೂರ್ ಸೇರಿದ್ದಾರೆ.
6.ಹರ್ಯಾಣದಲ್ಲಿ ಬಿಜೆಪಿ ಅನಿರೀಕ್ಷಿತವಾಗಿ 1 ಸ್ಥಾನ ಗಿಟ್ಟಿಸಿಕೊಂಡಿದೆ. 2 ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿ ಸುಭಾಷ್ ಚಂದ್ರ ಜಯ ಗಳಿಸಿದ್ದಾರೆ. ಇವರನ್ನು ಬಿಜೆಪಿ ಬೆಂಬಲಿಸಿದೆ. ಇನ್ನೊಂದು ಸ್ಥಾನದಲ್ಲಿ ಕೇಂದ್ರ ಸಚಿವ ಬಿಜೆಪಿಯ ಚೌದರಿ ಬಿರೇಂದ್ರ ಸಿಂಗ್ ಜಯ ಸಾಧಿಸಿದ್ದಾರೆ.
7.ಮಧ್ಯಪ್ರದೇಶದಲ್ಲಿ ಬಿಜೆಪಿಯ ಎಂ.ಜೆ.ಅಕ್ಬರ್ ಮತ್ತು ಅನಿಲ್ ದೇವ್ ಜಯ ಗಳಿಸಿದ್ದಾರೆ. ಇನ್ನೊಂದು ಸ್ಥಾನವನ್ನು ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಗೆದ್ದುಕೊಂಡಿದ್ದಾರೆ.
 8.ಜಾರ್ಖಂಡ್‌ನಲ್ಲಿ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ ಜಯ ಗಳಿಸಿದ್ದಾರೆ.
9.ಉತ್ತರಖಂಡ್‌ನಲ್ಲಿ ಕಾಂಗ್ರೆಸ್‌ನ ಪ್ರದೀಪ್ ತಾಮ್ಟಾ ಜಯ ಸಾಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News