ಬಟ್ಟೆ ಅಂಗಡಿಗೆ ನುಗ್ಗಿ ಕಳವು
Update: 2016-06-11 23:57 IST
ಉಡುಪಿ, ಜೂ.11: ಇಲ್ಲಿನ ಸಿಟಿ ಬಸ್ ನಿಲ್ದಾಣದ ಬಳಿಯ ಮನ್ನತ್ ಬಿಲ್ಡಿಂಗ್‌ನಲ್ಲಿ ರುವ ಬಟ್ಟೆ ಅಂಗಡಿಗೆ ಜೂ.10ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಸಂತೆಕಟ್ಟೆಯ ಮುಹಮ್ಮದ್ ಜಾವೆದ್ ಎಂಬವರ ಕಾಟನ್ ಚಾಯ್ಸೆ ರೆಡಿಮೇಡ್ ಬಟ್ಟೆ ಅಂಗಡಿಯ ಶಟರ್‌ನ ಬೀಗ ಮುರಿದು ಗ್ಲಾಸ್ ಡೋರ್‌ನ ಗಾಜು ಒಡೆದು ಒಳನುಗ್ಗಿದ ಕಳ್ಳರು, ಕ್ಯಾಶ್ ಡ್ರಾವರಿನಲ್ಲಿದ್ದ 5000ರೂ. ಮತ್ತು ಶೋಕೇಸ್‌ನಲ್ಲಿದ್ದ 6000ರೂ. ಮೌಲ್ಯದ ರೆಡಿಮೇಡ್ ಶರ್ಟ್ ಮತ್ತು ಟಿಶರ್ಟ್‌ಗಳನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.