×
Ad

ಪಿಯು ಉತ್ತರಪತ್ರಿಕೆಯ ಪ್ರತಿ ಸಿಗದವರ ಗಮನಕ್ಕೆ

Update: 2016-06-12 00:03 IST

ಮಂಗಳೂರು, ಜೂ.11: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ಈಗಾಗಲೇ ಇ-ಮೇಲ್ 
ಮೂಲಕ ಕಳುಹಿಸಲಾಗಿದೆ. ಆದಾಗ್ಯೂ ಸ್ಕಾನ್ ಮಾಡಿ ಉತ್ತರ ಪತ್ರಿಕೆಗಳು ಬಾರದೇ ಇರುವ ವಿದ್ಯಾರ್ಥಿಗಳು ನೋಂದಣಿ ಸಂಖ್ಯೆ, ಉತ್ತರ ಪತ್ರಿಕೆಗಳಿಗಾಗಿ ಅರ್ಜಿ ಸಲ್ಲಿಸಿದ ವಿಷಯ, ಬ್ಯಾಂಕ್ ಚಲನ್ ಸಂಖ್ಯೆ, ಮೊಬೈಲ್ ಫೋನ್ ನಂಬರ್ ಮತ್ತು ತಮ್ಮ ಇ-ಮೇಲ್ ವಿಳಾಸಗಳ ಮಾಹಿತಿಗಳೊಂದಿಗೆ ಜಿಲ್ಲಾ ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ದ.ಕ. ಜಿಲ್ಲೆ, ರಥಬೀದಿ ಮಂಗಳೂರು ಇವರಿಗೆ ಜೂ.12ರ ಸಂಜೆ 4 ಗಂಟೆಯೊಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News