×
Ad

ಸವಣೂರು: ಎಸ್ಪಿನೇತೃತ್ವದಲ್ಲಿ ಶಾಂತಿ ಸಭೆ

Update: 2016-06-12 00:03 IST

ಪುತ್ತೂರು, ಜೂ.11: ಸವಣೂರಿನಲ್ಲಿ ಶುಕ್ರವಾರ ರಾತ್ರಿ ನಡೆದ ವೈಯುಕ್ತಿಕ ವಿಚಾರದ ಗಲಭೆಯಿಂದ ಸಾರ್ವಜನಿಕರಿಗೆ ಇರುವ ಗೊಂದಲ ನಿವಾರಣೆಗಾಗಿ ಸವಣೂರು ಯುವಕ ಮಂಡಲದ ಯುವ ಸಭಾಭವನದಲ್ಲಿ ಜಿಲ್ಲಾ ಎಸ್ಪಿ ಭೂಷಣ್ ಜಿ. ಬೋರಸೆ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತು.
ಈ ಸಂದರ್ಭ ಮಾತನಾಡಿದ ಸವಣೂರು ಕೆ.ಸೀತಾರಾಮ ರೈ, ಸವಣೂರು ಶಾಂತಿ ಸೌಹಾರ್ದಕ್ಕೆ ಹೆಸರುವಾಸಿಯಾಗಿದೆ. ಕೆಲವು ಸಣ್ಣಪುಟ್ಟ ಗಲಭೆಗಳಿಗೆ ಕೋಮುಬಣ್ಣ ಹಚ್ಚುವ ಮೂಲಕ ಅಶಾಂತಿಗೆ ಕಾರಣವಾಗುತ್ತಿದೆ. ಇಲ್ಲಿ ಯಾವುದೇ ಕೋಮುವೈಷಮ್ಯ ಇಲ್ಲ. ಕೆಲವು ಕಿಡಿಗೇಡಿಗಳಿಂದ ಊರಿನ ಹೆಸರು ಹಾಳಾಗುತ್ತಿದೆ ಎಂದರು.
ತಾಪಂ ಮಾಜಿ ಉಪಾಧ್ಯಕ್ಷ ದಿನೇಶ್ ಮೆದು ಮಾತನಾಡಿ, ಸವಣೂರಿನಲ್ಲಿ ಪೊಲೀಸ್ ಹೊರಠಾಣೆಯ ಅಗತ್ಯ ಇದೆ ಎಂದರು. ವರ್ತಕ ಸಂಘದ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ತಾಪಂ ಮಾಜಿ ಸದಸ್ಯ ಅಬ್ದುರ್ರಹ್ಮಾನ್, ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಗ್ರಾಪಂ ಮಾಜಿ ಸದಸ್ಯ ಸುದರ್ಶನ್ ಕಂಪ, ಗ್ರಾಪಂ ಸದಸ್ಯ ಎಂ.ಎ. ರಫೀಕ್, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಮುಖ್ಯಗುರು ಗಿರಿಶಂಕರ್ ಸುಲಾಯ ಮತ್ತಿತರರು ಮಾತನಾಡಿದರು. ಎಲ್ಲ ಪ್ರಕರಣಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತೇವೆ. ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು ಎಂದು ಎಸ್ಪಿಭರವಸೆ ನೀಡಿದರು.
 ಸಭೆಯಲ್ಲಿ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು ,ಎನ್.ಸುಂದರ ರೈ ಸವಣೂರು, ತಾಪಂ ಉಪಾಧ್ಯಕ್ಷೆ ರಾಜೇಶ್ವರಿ, ಗ್ರಾಪಂ ಅಧ್ಯಕ್ಷೆ ಇಂದಿರಾ ಬಿ.ಕೆ.,ಸದಸ್ಯರಾದ ಸತೀಶ್ ಅಂಗಡಿಮೂಲೆ,ಅಬ್ದುರ್ರಝಾಕ್, ಸತೀಶ್ ಬಲ್ಯಾಯ, ಯುವಕ ಮಂಡಲದ ಅಧ್ಯಕ್ಷ ಸಚಿನ್, ಕಾರ್ಯದರ್ಶಿ ಸುಬ್ರಹ್ಮಣ್ಯ ಬಿ.ಎಸ್., ಶಾಫಿ, ಕರೀಂ,ಮುಹಮ್ಮದ್, ಸವಣೂರು ಹಿಂಜಾವೇ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಮುಗೇರುಗುತ್ತು, ಹಿಂದು ಯುವಸೇನೆಯ ಪ್ರಜ್ವಲ್ ರೈ ಪಾತಾಜೆ, ಚಾಪಲ್ಲ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಕಣಿಮಜಲು, ಕಾರ್ಯದರ್ಶಿ ಅಬೂಬಕರ್, ಅಲ್ ನೂರ್ ಮುಸ್ಲಿಮ್ ಯೂತ್ ಫೆಡರೇಶನ್ ಕಾರ್ಯದರ್ಶಿ ಸಿ.ಎ.ನಝೀರ್, ಎಂ.ಎಸ್.ರಫೀಕ್, ಸಿದ್ದೀಕ್ ಅಲೆಕ್ಕಾಡಿ, ಮುಹಮ್ಮದ್ ಬಿ.ಎಂ ಮತ್ತಿತರರು ಪಾಲ್ಗೊಂಡಿದ್ದರು.
ಪುತ್ತೂರು ಉಪವಿಭಾಗದ ಎಎಸ್ಪಿಸಿ.ಬಿ.ರಿಷ್ಯಂತ್, ಕಡಬ ಠಾಣಾ ಎಸ್ಸೈ ಉಮೇಶ್ ಉಪ್ಪಳಿಕೆ, ಸಂಪ್ಯ ಗ್ರಾಮಾಂತರ ಠಾಣಾ ಎಎಸ್ಸೈ ಚೆಲುವಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News