ಭಾರತ-ಪಾಕ್ ಗಡಿಯಲ್ಲಿ ಇಬ್ಬರು ಡ್ರಗ್ಸ್ ಸಾಗಾಣಿಕೆದಾರರನ್ನು ಹೊಡೆದುರುಳಿಸಿದ ಭದ್ರತಾ ಪಡೆ
Update: 2016-06-12 10:42 IST
ಪಂಜಾಬ್ , ಜೂ.12:ಭಾರತ-ಪಾಕಿಸ್ತಾನದ ಗಡಿಯಲ್ಲಿರುವ ಫಝಿಕಾದಲ್ಲಿ ಭಾರತಕ್ಕೆ ಅಕ್ರಮವಾಗಿ ಮಾದಕ ದ್ರವ್ಯ ಕಳ್ಳ ಸಾಗಣೆ ಮಾಡಲು ಯತ್ನಿಸಿದ ಇಬ್ಬರು ಪಾಕಿಸ್ತಾನದ ವ್ಯಕ್ತಿಗಳನ್ನು ಭದ್ರತಾ ಪಡೆಗಳು ಗುಂಡುಕ್ಕಿ ಕೊಂದಿದ್ದಾರೆ.ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.
ರವಿವಾರ ಬೆಳಗಿನ ಜಾವ ಭಾರತಕ್ಕೆ ನುಗ್ಗಲೆತ್ನಿಸಿದ ಮೂವರು ಕಳ್ಳ ಸಾಗಾಣಿಕೆದಾರರ ಪೈಕಿ ಇಬ್ಬರನ್ನು ಬಿಎಸ್ಎಫ್ ಯೋಧರು ನಡೆಸಿದ ಕಾರ್ಯಾಚರಣೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮತ್ತೋರ್ವನಿಗೆ ಗಾಯವಾಗಿದೆ.
ಮೃತರ ಬಳಿಯಿಂದ 15 ಪ್ಯಾಕೆಟ್ ಮಾದಕದ್ರವ್ಯ (ಹೆರಾಯಿನ್ ), ಪಿಸ್ತೂಲ್, ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್ಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.