×
Ad

ಫೆಲೆಸ್ತೀನಿಯರ ಪ್ರಯಾಣ ನಿಷೇಧ: ಇಸ್ರೇಲ್ ವಿರುದ್ಧ ಅರಬ್ ಜಗತ್ತಿನ ಆಕ್ರೋಶ

Update: 2016-06-12 11:28 IST

ಜೆರುಸಲೇಂ, ಜೂನ್ 12: ಫೆಲೆಸ್ತೀನಿಯರ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಕಠಿಣ ಕ್ರಮಗಳನ್ನು ವಿರೋಧಿಸಿ ಅರಬ್ ಜಗತ್ತು ಪ್ರತಿಭಟನೆಯನ್ನು ಸಲ್ಲಿಸಿದೆ. ಮೂಲಭೂತ ಮಾನವ ಹಕ್ಕುಗಳನ್ನು ಕೂಡಾ ಉಲ್ಲಂಘಿಸುವ ಅದರ ವರ್ತನೆ ಸರಿಯಲ್ಲ. ಇದರಿಂದ ಹಿಂದೆಸರಿಯುವಂತೆ ಇಸ್ರೇಲ್‌ನ್ನು ಪ್ರೇರೇಪಿಸಬೇಕೆಂದು ಅಂತಾರಾಷ್ಟ್ರೀಯ ಸಮೂಹದೊಂದಿಗೆ ಅದು ಆಗ್ರಹಿಸಿದೆ.

ರಮಝಾನ್ ತಿಂಗಳಲ್ಲಿ 83,000 ಫೆಲೆಸ್ತೀನಿಯರಿಗೆ ಮಸ್ಚಿದುಲ್ ಅಕ್ಸಾ ಸಹಿತ ಇತರ ಪುಣ್ಯ ಸ್ಥಳಗಳಿಗೆ ಹೋಗದಂತೆ ಇಸ್ರೇಲ್ ಪ್ರಯಾಣದ ಅನುಮತಿ ರದ್ದು ಮಾಡಿ ಪ್ರತಿಕಾರಕ್ಕಿಳಿದಿರುವ ಇಸ್ರೇಲ್ ವರ್ತನೆಯನ್ನು ಅರಬ್ ಜಗತ್ತು ತೀವ್ರವಾಗಿ ಟೀಕಿಸಿದೆ.

ಫೆಲೆಸ್ತೀನಿ ಹೋರಾಟಗಾರರು ನಡೆಸಿದ ಆಕ್ರಮಣದಲ್ಲಿ ನಾಲ್ವರು ಇಸ್ರೇಲಿಯರು ಕೊಲ್ಲಲ್ಪಟ್ಟ ಹಿನ್ನೆಲೆಯಲ್ಲಿ ಫೆಲೆಸ್ತೀನ್ ಜನರ ಮೇಲೆ ಕ್ರೂರ ಕ್ರಮಗಳಿಗೆ ಇಸ್ರೇಲ್ ಮುಂದಾಗಿದೆ. ಫೆಲೆಸ್ತೀನ್ ವಿರೋಧಿ ಕ್ರಮಗಳನ್ನು ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಮರ್ಥಿಸಿಕೊಂಡಿದ್ದಾರೆ. ಆದರೆ ಪ್ರಯಾಣದ ಪರವಾನಿಗೆ ರದ್ದತಿಯನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂದು ಅರಬ್ ಜಗತ್ತು ಸ್ಪಷ್ಟ ಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News