×
Ad

ಮುಟ್ಟತ್ತೋಡಿ ಸೇವಾ ಸಹಕಾರಿ ಬ್ಯಾಂಕ್ ವಂಚನೆ ಪ್ರಕರಣದ ಇನ್ನೋರ್ವ ಆರೋಪಿ ಬಂಧನ

Update: 2016-06-12 12:38 IST

ಕಾಸರಗೋಡು: ಮುಟ್ಟತ್ತೋಡಿ ಸೇವಾ ಸಹಕಾರಿ  ಬ್ಯಾಂಕ್ ನಿಂದ ನಾಲ್ಕು ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ  ಇನ್ನೋರ್ವ ಆರೋಪಿಯನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು   ನಾಯಮ್ಮರಮೂಲೆ ಶಾಖೆಯ  ಅಪ್ರೈಸರ್ , ನೀಲೆಶ್ವರದ  ಟಿ. ವಿ ಸತೀಶ್ ( ೪೦) ಎಂದು ಗುರುತಿಸಲಾಗಿದೆ. ಇದರಿಂದ ಪ್ರಕರಣದಲ್ಲಿ  ಬಂಧಿತರಾದವರ ಸಂಖ್ಯೆ   ಐದಕ್ಕೇರಿದೆ.  ಪ್ರಕರಣಕ್ಕೆ ಸಂಬಂಧಪಟ್ಟ೦ತೆ ಪ್ರಮುಖ ಆರೋಪಿ  ಕುಂಟಾರಿನ ಯು . ಕೆ  ಹಾರಿಸ್ ,ವಿದ್ಯಾನಗರ ಶಾಖೆಯ  ಅಪ್ರೈಸರ್  ಟಿ. ವಿ ಸತ್ಯಪಾಲನ್,   ಚೆಂಗಳ  ಸಿಟಿಜನ್ ನಗರದ  ಕೆ . ಎ ಅಬ್ದುಲ್ ಮಜೀದ್ ,  ಜಯರಾಜನ್ ರನ್ನು ಈಗಾಗಲೇ ಬಂಧಿಸಲಾಗಿದೆ.
ಹಾರಿಸ್ , ಸತೀಶ್ ಮತ್ತು ತಲೆಮರೆಸಿಕೊಂಡಿರುವ ಬ್ಯಾಂಕ್ ಮೇನೇಜರ್  ಸಂತೋಷ್ ಕುಮಾರ್   ವಂಚನೆ ಜಾಲದ ಸೂತ್ರದಾರರು  ಎಂದು ತನಿಖಾ ತಂಡ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News