ನೇಣು ಬಿಗಿದು ಮಹಿಳೆ ಆತ್ಮಹತ್ಯೆ
Update: 2016-06-12 16:32 IST
ಸುಳ್ಯ: ಅಜ್ಜಾವರ ಗ್ರಾಮದ ಅತ್ಯಾಡಿಯಲ್ಲಿ ಮಹಿಳೆಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಅತ್ಯಾಡಿ ರಾಘವ ಗೌಡರ ಪತ್ನಿ ಗೀತಾಕುಮಾರಿ ಎಂಬವರು ಆದಿತ್ಯವಾರ ಬೆಳಿಗ್ಗೆ ಮನೆ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ 43 ವರ್ಷ ವಯಸ್ಸಾಗಿತ್ತು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.