×
Ad

ಮೂಡುಬಿದಿರೆ: ಗಾಣಿಗರ ಸಂಘದಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ, ಸನ್ಮಾನ

Update: 2016-06-12 16:38 IST

ಮೂಡುಬಿದಿರೆ : ಇಲ್ಲಿನ ಸಪಳಿಗ ಯಾನೆ ಗಾಣಿಗರ ಸೇವಾ ಸಂಘ(ರಿ), ಗಾಣಿಗರ ಮಹಿಳಾ ವೇದಿಕೆ ಮತ್ತು ಯುವ ವೇದಿಕೆಯ  ನೇತೃತ್ವದಲ್ಲಿ ವಾರ್ಷಿಕ ಮಹಾಸಭೆ, ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಹಿರಿಯರಿಗೆ ಮತ್ತು ರಾಷ್ಟ್ರ ಮಟ್ಟದ ಕ್ರೀಡಾ ಸಾಧಕಿಗೆ ಸನ್ಮಾನ ಕಾರ್ಯಕ್ರಮವು ಪೊನ್ನೆಚ್ಚಾರಿ ಶ್ರೀ ವೆಂಕಟರಮಣ ದೇವಸ್ಥಾನದ ಸಭಾಭವನದಲ್ಲಿ ಭಾನುವಾರ ನಡೆಯಿತು. 

ಆಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಈಶ್ವರ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಮಾಜದ ಹಿರಿಯರಾದ ಕರಿಯ ಸಪಲಿಗ ಬಾರಾಡಿ, ಮೂಡು ಮಾರ್ನಾಡಿನ ವಾರಿಜ ಸಪಲ್ದಿ ಹಾಗೂ ವಾಲಿಬಾಲ್ ಮತ್ತು ಟೆನ್ನಿಸ್ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವ ದಿವ್ಯಾ ಜಿ. ಅವರನ್ನು ಸನ್ಮಾನಿಸಿ ಮಾತನಾಡಿ ನಾವು ಯಾವುದೇ ಕೆಲಸವನ್ನು ಮಾಡಬೇಕಾದರೆ ದೇವರ ಮೇಲೆ ಭಕ್ತಿಯ ಜೊತೆಗೆ ಪ್ರಯತ್ನವೂ ಮುಖ್ಯವಾದರೆ ದೇವರ ಒಲವನ್ನು ಪಡೆಯಲು ಸಾಧ್ಯ. ಸಂಘ ವತಿಯಿಂದ ಉತ್ತಮ ಕೆಲಸಗಳನ್ನು ಮಾಡುತ್ತಾ ಬರುತ್ತಿರುವ ತಾವು ಮುಂದೆಯೂ ಇಂತಹ ಕೆಲಸಗಳಿಗೆ ಹೆಚ್ಚು ಹೆಚ್ಚು ಮಾಡುವಂತ್ತಾಗಬೇಕು ಎಂದು ಹೇಳಿದರು. 

ಅರ್ಹತಾ ವಿದ್ಯಾರ್ಥಿ ವೇತನ ವಿತರಣೆ: ದಿ.ಸಾಧು ಬಿ.ಪುತ್ರನ್ ಅವರ ಸ್ಮರಣಾರ್ಥ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿರುವ ಇಬ್ಬರಿಗೆ, ದಿ. ಜಾರಪ್ಪ ಮೇಸ್ತ್ರಿ ಸ್ಮರಣಾರ್ಥ ಎಸ್ಎಸ್ಎಲ್ಸಿಯಲ್ಲಿ ಅಂಕ ಗಳಿಸಿರುವ ಮೂವರಿಗೆ, ದಿ/ಸುಂದರಿ ಜಾರಪ್ಪ ಸ್ಮರಣಾರ್ಥ 7 ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿರುವ ಮೂವರಿಗೆ ಹಾಗೂ ದಿ/ಬಾಬು ಸಪಲಿಗ ಅವರ ಸ್ಮರಣಾರ್ಥ ಕ್ರೀಡಾ ಕ್ಷೇತ್ರದಲ್ಲಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿರುವ ಇಬ್ಬರು ವಿದ್ಯಾಥರ್ಿಗಳಿಗೆ ಅರ್ಹತಾ ವಿದ್ಯಾಥರ್ಿ ವೇತನವನ್ನು ವಿತರಿಸಲಾಯಿತು. 

  ಸಪಳಿಗ  ಯಾನೆ ಗಾಣಿಗರ ಸೇವಾ ಸಂಘದ ಅಧ್ಯಕ್ಷ ರವಿ ಎಸ್.ಪುತ್ರನ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಟೆಂಪಲ್ ಟೌನ್ನ ಅಧ್ಯಕ್ಷ ಉಮೇಶ್ ರಾವ್, ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಪ್ರೊ.ಸುರೇಶ್ ಕಟೀಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಮುದಾಯದ ಗುರಿಕಾರ ಸುಂದರ ನಾರಂಪಾಡಿ, ಸಮಾಜ ಸೇವಾ ಕಾರ್ಯಕರ್ತ ಚಂದ್ರಶೇಖರ ಎಡಪದವು ಮತ್ತಿತರರು ಉಪಸ್ಥಿತರಿದ್ದರು. 

  ಗೌರವಾಧ್ಯಕ್ಷ ಪದ್ಮನಾಭ ಎನ್.ಕಟೀಲು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ರಾಜೇಶ್ ಬಂಗೇರಾ ಜಮಾ ಖಚರ್ಿನ ವಿವರ ನೀಡಿದರು. ಜತೆ ಕಾರ್ಯದರ್ಶಿ ಕೇಶವ ಪೊಳಲಿ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಶಿಕ್ಷಕ ಜಗನ್ನಾಥ ಸಪಳಿಗ ವಂದಿಸಿದರು.

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News