ಸಮಾಜಸೇವೆಯಲ್ಲಿ ಸದಾ ಮುಂದು ಈ ರಿಕ್ಷಾ ಚಾಲಕ

Update: 2016-06-12 13:59 GMT

 ಮಂಗಳೂರು,ಜೂ .12: ನಗರದಲ್ಲಿ ಟ್ರಾಫಿಕ್ ಜಾಮ್ ಕಾಣಿಸಿಕೊಂಡರೆ ಇವರು ಪ್ರತ್ಯಕ್ಷ, ರಸ್ತೆಯಲ್ಲಿ ಹೊಂಡ ಕಾಣಸಿಕ್ಕರೆ ಸ್ವಯಂಪ್ರೇರಿತ ಕೆಲಸದಲ್ಲಿ ಇವರೆ ಸದಾ ಮುಂದು..

ಇವರು ವಾಮಾಂಜೂರುನ ನಿವಾಸಿ ಬಾಬು . ವೃತ್ತಿಯಲ್ಲಿ ರಿಕ್ಷಾ ಚಾಲಕ. ಆದರೆ ಇವರಿಗೆ ಸದಾ ಇರುವುದು ಸಾಮಾಜಿಕ ಸೇವಾ ಕಾರ್ಯದ ಚಿಂತನೆ.

 ಬೆಂದೂರ್‌ವೆಲ್‌ನಲ್ಲಿ ರವಿವಾರ ಬಾಬು ಅವರು ರಸ್ತೆಗಳ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡುತ್ತಿದ್ದರು. ಮಂಗಳೂರು ಮಹಾನಗರ ಪಾಲಿಕೆ ಮಾಡಬೇಕಾಗಿದ್ದ ಕೆಲಸವನ್ನು ಇವರೆ ಸ್ವಯಂ ಆಸಕ್ತಿಯಿಂದ ಮಾಡುತ್ತಿದ್ದರು.

      ಇಂತಹ ಕೆಲಸ ಮಾಡಲು ಮನಪಾ ಇದೆ. ಜನರಿಗೆ ಬೇಕಿದ್ದರೆ ಅವರೆ ಮಾಡಲಿ ಎಂದು ರಸ್ತೆಗಳ ಗುಂಡಿಗಳನ್ನು ನೋಡಿ ಜನರು ಪ್ರತಿಕ್ರೀಯೆ ಕೊಡುತ್ತಾರೆಯೆ ವಿನಃ ತಾನೇ ಆ ಕೆಲಸವನ್ನು ಮಾಡಿ ಮಾದರಿಯಾಗಬೇಕಂದು ಯಾರಿಗೂ ಅನಿಸುವುದಿಲ್ಲ. ಆದರೆ ಕೆಲಸ ಮಾಡಿ ಜನರಿಗೆ ಸಹಾಯ ಮಾಡಬಹುದು ಎಂಬುದನ್ನು ತೋರಿಸಿದವರು ಬಾಬು.

    

 ಕಳೆದ ಕೆಲವು ದಿನಗಳಿಂದ ಇರುವ ಗುಂಡಿಗಳನ್ನು ಮುಚ್ಚಲು ಮನಪಾ ಆಸಕ್ತಿ ತೋರದೆ ಇರದಾಗ ಬಾಬು ಅವರು ಕೆಲವರಲ್ಲಿ ಗುಂಡಿಗಳನ್ನು ಮುಚ್ಚುವ ಪ್ರಯತ್ನದ ಬಗ್ಗೆ ವಿನಂತಿಸಿದ್ದರು. ಆದರೆ ಯಾರೂ ಮುಂದೆ ಬಾರದೆ ಇದ್ದಾಗ ರವಿವಾರದಂದು ಮದ್ಯಾಹ್ನ ಅವರೆ ಗುಂಡಿಗಳನ್ನು ಡಾಮಾರುಗಳ ತುಂಡುಗಳನ್ನು ಹಾಕಿ ಮುಚ್ಚಿದ್ದಾರೆ. ತಮ್ಮ ರಿಕ್ಷಾದಲ್ಲಿಯೆ ಎಸ್ ಸಿ ಎಸ್ ಆಸ್ಪತ್ರೆಯ ಬಳಿಯಿರುವ ಡಾಮಾರು ತುಂಡುಗಳನ್ನು ತಂದು ಹೊಂಡಗಳನ್ನು ಮುಚ್ಚಿದ್ದಾರೆ. ಬಾಬು ಅವರು ಈ ಹಿಂದೆ ಬಲ್ಮಠದ ಬಳಿಯಲ್ಲಿ ಇದೇ ರೀತಿ ಒಬ್ಬರೆ ರಸ್ತೆಗಳ ಹೊಂಡಗಳನ್ನು ಮುಚ್ಚಿದ್ದರು. ಬೆಂದೂರ್‌ವೆಲ್ ಸರ್ಕಲ್‌ನಲ್ಲಿ ಹೆಚ್ಚಿನ ಸಂದರ್ಭದಲ್ಲಿ ಸಂಚಾರ ನಿಯಂತ್ರಣ ಕೆಲಸವನ್ನು ಮಾಡುತ್ತಿರುತ್ತಾರೆ.

ನಿಸ್ವಾರ್ಥದಿಂದ ಮಾಡುವ ಇವರ ಸಮಾಜಸೇವೆ ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.

 ಕಳೆದ 25 ವರ್ಷದಿಂದ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದೇನೆ. ಕೆಲಸ ಮಾಡುವುದರ ಜೊತೆಗೆ ಜನರಿಗೆ ಸಹಾಯವಾಗುವಂತಹ ಕೆಲಸ ಮಾಡಬೇಕು ಎಂಬುದು ನನ್ನಿಚ್ಚೆ. ಅದರಂತೆ ಈ ಕೆಲಸಗಳನ್ನು ಮಾಡುತ್ತಿದ್ದೇನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News