ಮಂಗಳೂರು: ಕಚ್ಚೀ ಮಸೀದಿಯಲ್ಲಿ ರಮದಾನ್ ಪ್ರವಚನ
ಮಂಗಳೂರು,ಜೂ.12: ಅಲ್ ಹಖ್ ಫೌಂಡೇಶನ್ ಮತ್ತು ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ (ರಿ) ಇದರ ಜಂಟಿ ಆಶ್ರಯದಲ್ಲಿ ಜೂನ್ 13 ರಿಂದ ಜೂನ್ 25ರ ವರೆಗೆ ಝುಹರ್ ನಮಾಝಿನ ನಂತರ ಖ್ಯಾತ ವಿದ್ವಾಂಸರಿಂದ ಮಂಗಳೂರಿನ ಬಂದರ್ ಸಮೀಪದ ಕಚ್ಚಿ ಮಸೀದಿಯಲ್ಲಿ ರಮದಾನ್ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಶೇಕ್ ಅಬ್ದುರ್ರಹೀಮ್ ಸಗ್ರಿ ಯವರು ಜೂನ್ 13ರಂದು ತೌಹೀದ್ ಎಂಬ ವಿಷಯದಲ್ಲಿ ಹಾಗೂ ಜೂನ್ 14ರಂದು ಖೈರ್ ಉಮ್ಮತ್ ಎಂಬ ವಿಷಯದಲ್ಲಿ ಉರ್ದು ಭಾಷೆಯಲ್ಲಿ, ಮೌ| ಉಮರ್ ಸ್ವಲಾಹಿ ಯವರು ಜೂನ್ 16ರಂದು ಮರಣ ನಂತರ ಎಂಬ ವಿಷಯದಲ್ಲಿ ಮಲಯಾಳಂ ಭಾಷೆಯಲ್ಲಿ, ಮೌ| ಅಬ್ದುಲ್ ಗಫೂರ್ ಜಮಈಯವರು ಜೂನ್ 20ರಂದು ಅಲ್ಲಾಹು ಸರ್ವಶಕ್ತನು ಎಂಬ ವಿಷಯದಲ್ಲಿ ಹಾಗೂ ಜೂನ್ 21ರಂದು ಬದ್ರ್ ಸಂದೇಶ ವಿಷಯದಲ್ಲಿ ಉರ್ದು ಭಾಷೆಯಲ್ಲಿ, ಜನಾಬ್ ಅಲಿ ಉಮರ್ ರವರು ಜೂನ್ 22ರಂದು ಅಹ್ಲುಸುನ್ನತ್ ವಲ್ ಜಮಾಅ ಎಂಬ ವಿಷಯದಲ್ಲಿ ಬ್ಯಾರಿ ಭಾಷೆಯಲ್ಲಿ, ಫೈಝಲ್ ಮೌಲವಿಯವರು ಜೂನ್ 23ರಂದು ಅಲ್ಲಾಹನೆಡೆಗೆ ಮರಳಿರಿ ಎಂಬ ವಿಷಯದಲ್ಲಿ ಮಲಯಾಳಂ ಭಾಷೆಯಲ್ಲಿ, ಮೌ| ಅಬ್ದುಲ್ ಫಾರೂಕಿಯವರು ಜೂನ್ 25ರಂದು ರಮದಾನಿನ ವಿಜಯಿಗಳು ಎಂಬ ವಿಷಯದಲ್ಲಿ ಮಲಯಾಳಂ ಭಾಷೆಯಲ್ಲಿ ಪ್ರವಚನ ನೀಡಿಲಿದ್ದಾರೆ ಎಂದು ಮೂಸಾ ಫಾಝಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.