×
Ad

ಇಮೇಲ್ ಹ್ಯಾಕ್: ಬ್ಯಾಂಕ್ ಖಾತೆಯಿಂದ ಹಣ ವಂಚನೆ

Update: 2016-06-12 23:37 IST

ಉಡುಪಿ, ಜೂ.12: ಇಮೇಲ್ ಹ್ಯಾಕ್ ಮಾಡಿ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 ಮೆಲ್ವಿನ್ ಡಿಕೊಸ್ತ ವಿಜಯ ಬ್ಯಾಂಕ್ ಕೊರಂಗ್ರಪಾಡಿ ಬ್ರಾಂಚ್‌ನಲ್ಲಿ ಎನ್‌ಆರ್‌ಐ ಖಾತೆಯನ್ನು ಹೊಂದಿದ್ದು, ಇವರು ತಮ್ಮ ಖಾತೆಯಿಂದ ಪತ್ನಿಯ ವೈದ್ಯಕೀಯ ವೆಚ್ಚದ ಸಲುವಾಗಿ ಸೌತ್ ಇಂಡಿಯಾ ಬ್ಯಾಂಕಿನ ಖಾತೆಗೆ 2,35,000ರೂ. ಜಮೆ ಮಾಡುವಂತೆ ಬ್ಯಾಂಕಿಗೆ ಜೂ.7ರಂದು ಈಮೇಲ್ ಸಂದೇಶ ಕಳುಹಿಸಿದ್ದರು.
ಅದೇ ದಿನ ಮೆಲ್ವಿನ್‌ರ ಇಮೇಲ್ ಖಾತೆಯನ್ನು ಹ್ಯಾಕ್ ಮಾಡಿದ ದುಷ್ಕರ್ಮಿಗಳು ಬ್ಯಾಂಕ್‌ಗೆ ಮತ್ತೆ ಇಮೇಲ್ ಸಂದೇಶ ಕಳುಹಿಸಿ, ಈ ಹಣವನ್ನು ಪವನ್ ಸಿಂಗ್ ಐಸಿಐಸಿಐ ಬ್ಯಾಂಕ್, ಚಾಂದಿನಿ ಚೌಕ್, ದೆಹಲಿ ಖಾತೆದಾರರು ಐಸಿಐಸಿಐ ಬ್ಯಾಂಕಿನ ಖಾತೆ ನಂಬರ್ 629205502043ಕ್ಕೆ ಜಮೆ ಮಾಡುವಂತೆ ತಿಳಿಸಿದ್ದರು. ಅದರಂತೆ ಬ್ಯಾಂಕ್‌ನ ಸಿಬ್ಬಂದಿ ಆ ಖಾತೆಗೆ ಹಣ ಜಮೆ ಮಾಡುವ ಮೂಲಕ ಮೋಸ ಆಗಿದೆ ಎಂದು ಮೆಲ್ವಿನ್ ದೂರಿ ನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News