×
Ad

ರಮಝಾನ್ ಕಿಟ್ ವಿತರಣೆ

Update: 2016-06-12 23:53 IST

ರಮಝಾನ್ ಕಿಟ್ ವಿತರಣೆ

ಮಂಜೇಶ್ವರ, ಜೂ.12: ಸುಮಾರು 3,000 ಮಂದಿ ನಿರ್ಗತಿಕ ಕುಟುಂಬದವರನ್ನು ಗುರುತಿಸಿ ಅವರಿಗೆ ಆಹಾರ ಸಾಮಗ್ರಿಗಳ ಕಿಟ್‌ನ ಜೊತೆ ಪ್ರತಿಯೊಬ್ಬರಿಗೂ ಅವರಿಗಿಷ್ಟವಾದ ಬಟ್ಟೆ ಬರೆಗಳನ್ನು ನೀಡುವ 21 ಲಕ್ಷ ರೂ. ವೆಚ್ಚದ ರಿಲೀಫ್ ವಿತರಣಾ ಕಾರ್ಯಕ್ರಮ ರವಿವಾರ ನಡೆಯಿತು.

ಕಡಂಬಾರ್ ಶಾಲಾ ಮೈದಾನದಲ್ಲಿ ಪಳ್ಳಂಗೋಡ್ ಅಬ್ದುಲ್ ಖಾದರ್ ಮದನಿಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಸ್‌ವೈಎಸ್ ಜಿಲ್ಲಾಧ್ಯಕ್ಷ ಟಿ.ಎಸ್. ಆಟಕೋಯ ತಂಙಳ್ ಉದ್ಘಾಟಿಸಿದರು. ಕೆ.ಪಿ. ಹುಸೈನ್ ಸಅದಿ ಕೆ.ಸಿ.ರೋಡ್ ಮುಖ್ಯ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಹಸನ್ ಸಖಾಫಿ ಮಯ್ಯ, ಮುಹಮ್ಮದ್ ಸಖಾಫಿ, ಸೂಫಿ ಮದನಿ, ಬಶೀರ್ ಮಾಸ್ಟರ್ ಪುಳಿಕ್ಕಲ್, ಅಬ್ದುರ್ರಹ್ಮಾನ್ ಸಅದಿ ಉಪಸ್ಥಿತರಿದ್ದರು. ರಹೀಂ ಅರಿಮಲ, ಲತೀಫ್ ಬನಾನ, ಮುಸ್ತಫಾ ಎಂ.ಡಿ. ಕಡಂಬಾರ್, ಕಲೀಲ್, ಅಝೀಝ್, ಹನೀಫ್, ರಂಶೀದ್, ಕರೀಂ, ಎ.ಎಸ್. ಮುನೀರ್ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು.

ಪಲಿಮಾರು: ಎಸ್ಕೆಎಸ್ಸೆಸ್ಸೆಫ್‌ನಿಂದ ರಮಝಾನ್ ಕಿಟ್ ವಿತರಣೆ

ಪಡುಬಿದ್ರೆ, ಜೂ.12: ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿ ಹಾಗೂ ಕುವೈತ್ ಸಮಿತಿಯ ವತಿಯಿಂದ ಉಡುಪಿ ಜಿಲ್ಲೆಯ ಅರ್ಹ ಕುಟುಂಬಕ್ಕೆ ರಮಝಾನ್ ಕಿಟ್‌ಗಳನ್ನು ರವಿವಾರ ಪಲಿಮಾರಿನ ಇನ್ನಾ ಮಸೀದಿಯಲ್ಲಿ ವಿತರಿಸಲಾಯಿತು.

ಈ ಸಂದರ್ಭ ಮಾತನಾಡಿದ ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಪ್ರವಾದಿವರ್ಯರು ತನ್ನ ಸಮೀಪದಲ್ಲಿರುವ ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುವಂತೆ ಕರೆ ನೀಡಿದ್ದಾರೆ ಎಂದರು.

ಪಲಿಮಾರು ಜುಮಾ ಮಸೀದಿ ಖತೀಬ್ ಕೆ.ಎಂ.ಅಬ್ದುರ್ರಹ್ಮಾನ್ ಫೈಝಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಎಂ.ಪಿ. ಮೊಯ್ದಿನಬ್ಬ, ಜಮಾಅತ್ ಕಾರ್ಯದರ್ಶಿ ಎಂ.ಪಿ.ಶೇಖಬ್ಬ, ಶಂಸುಲ್ ಉಲಮಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಜಿ ಅಬ್ದುರ್ರಹ್ಮಾನ್ ಕನ್ನಂಗಾರ್, ಜಲೀಲ್ ಸಾಹೇಬ್ ಕೃಷ್ಣಾಪುರ, ರಾಜ್ಯ ಎಸ್ಕೆಎಸ್ಸೆಸ್ಸೆಫ್ ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ, ಉಸ್ಮಾನ್ ಅಬ್ದುಲ್ಲಾ ಸಾಹೇಬ್ ಕಾಟಿಪಳ್ಳ, ಎಸ್‌ವೈಎಸ್ ಉಡುಪಿ ಜಿಲ್ಲಾಧ್ಯಕ್ಷ ಹಾಜಿ ಹಮ್ಮಬ್ಬ ಮೊಯ್ದಿನ್, ಅಬ್ದುಲ್ಲಾ ಬಾಸಿತ್ ಕಾಂಜರಕಟ್ಟೆ ಮತ್ತಿತರರರು ಉಪಸ್ಥಿತರಿದ್ದರು.

ಪುಸ್ತಕ, ರಮಝಾನ್ ಕಿಟ್ ವಿತರಣೆ

ಮಂಗಳೂರು,ಜೂ.12: ಪ್ರತಿಯೊಬ್ಬ ಮನುಷ್ಯನಿಗೆ ಶಿಕ್ಷಣವು ಅತ್ಯವಶ್ಯವಾಗಿದ್ದು, ಅದರಲ್ಲೂ ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹಿಸುತ್ತಿರುವ ಸೋಶಿಯಲ್ ವೆಲ್ಫೇರ್ ಅಸೋಸಿಯೇಶನ್ ಕಾರ್ಯ ಶ್ಲಾಘನೀಯವಾದುದು ಎಂದು ಬಂದರ್ ಸರ್ಕಲ್ ಇನ್‌ಸ್ಪೆಕ್ಟರ್ ಶಾಂತಾರಾಂ ಕುಂದರ್ ಅಭಿಪ್ರಾಯಪಟ್ಟರು.

ಬಂದರ್ ಬೀಬಿ ಅಲಾಬಿ ರಸ್ತೆಯ ಕಚೇರಿಯಲ್ಲಿ ಸೋಶಿಯಲ್ ವೆಲ್ಫೇರ್ ಅಸೋಶಿಯೇಶನ್‌ನ 6ನೆ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಮತ್ತು ರಮಝಾನ್ ಕಿಟ್ ಹಾಗೂ ನಮಾಝ್ ಸಮವಸ್ತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕ್ಷರ ಸಂತ ಹರೇಕಳ ಹಾಜಬ್ಬ ವಹಿಸಿದ್ದರು. ಬೀದಿಬದಿ ವ್ಯಾಪಾರಸ್ಥರ ಸಂಘದ ಶರೀಫ್, ಸಾಮಾಜಿಕ ಕಾರ್ಯಕರ್ತ (ಇ.ಕೆ.ರಕ್ಕ್ ಕಣ್ಣೂರು )ಸನ್ಮಾನಿಸಲಾಯಿತು. ಸಾಹಿತಿ ಬಿ.ಎ. ಮಹಮ್ಮದಲಿ ಕಮ್ಮರಡಿ, ಎಸ್‌ಡಿಪಿಐ ಪಕ್ಷದ ಜಲೀಲ್ ಕೃಷ್ಣಾಪುರ, ಕರವೇ ಮುಖಂಡ ಮುಹಿಶಿರ್ ಸಾಮಾಣಿಗೆ, ಶಬೀರ್ ಮಾಚಾರ್, ಮುಸ್ಲಿಂ ಲೀಗ್ ಮುಖಂಡ ಎಚ್. ಇಸ್ಮಾಯೀಲ್, ಉದ್ಯಮಿ ಹಾಜಿ ಹಸನ್ ಕುಂದಾಪುರ, ಜಾಫರ್ ಬಂಟ್ವಾಳ ಉಪಸ್ಥಿತರಿದ್ದರು. ಶರೀಫ್ ಕೊಲ ಸ್ವಾಗತಿಸಿದರು. ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News