ಕೃಷಿಯಲ್ಲಿ ಡಿಪ್ಲೊಮಾ ಪದವಿಗೆ ಅವಕಾಶ

Update: 2016-06-12 18:24 GMT

ಪಡುಬಿದ್ರೆ, ಜೂ.12: ಕೃಷಿಯ ಬಗ್ಗೆ ಆಸಕ್ತಿಯುಳ್ಳ 10ನೆ ತರಗತಿ ಪಾಸಾದ 18 ವರ್ಷದೊಳಗಿನ ಮಕ್ಕಳಿಗೆ ಕೃಷಿಯಲ್ಲಿ 2 ವರ್ಷಗಳ ಅವಧಿಯ ಡಿಪ್ಲೊಮಾ ಪದವಿ ಇದೆ. ಆಸಕ್ತರು ಈ ಬಗ್ಗೆ ಅರ್ಜಿ ಸಲ್ಲಿಸಬಹುದು ಎಂದು ಬ್ರಹ್ಮಾವರ ಕೃಷಿ ವಿಜ್ಞ್ಞಾನ ಕೇಂದ್ರದ ಸಹಾಯಕ ಪ್ರಾಧ್ಯಾಪಕ, ಕೃಷಿ ವಿಜ್ಞಾನಿ ವಿ.ಆರ್. ವಿನೋದ್ ಹೇಳಿದರು.

ಪಲಿಮಾರು ಗ್ರಾಪಂನಲ್ಲಿ ನಡೆದ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ರೈತರೊಂದಿಗೆ ಸಂವಾದ ಕಾರ್ಯಕ್ರಮದಡಿ ಅವರು ಮಾತನಾಡಿದರು.

ಪಲಿಮಾರು ಗ್ರಾಪಂ ಅಧ್ಯಕ್ಷ ಜಿತೇಂದ್ರ ಫುರ್ಟಾಡೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಪ್ರಭಾರ ಸಹಾಯಕ ಕೃಷಿ ನಿರ್ದೇಶಕ ಮೋಹನ್‌ರಾಜ್, ತೋಟಗಾರಿಕಾ ಇಲಾಖೆಯ ಪ್ರಬಾರ ಸಹಾಯಕ ಅಧಿಕಾರಿ ಪುಷ್ಪಾ ಎಂ.ಎಸ್. ಇಲಾಖೆಗಳ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ತಾಪಂ ಸದಸ್ಯ ದಿನೇಶ್ ಕೋಟ್ಯಾನ್, ಗ್ರಾಪಂ ಉಪಾಧ್ಯಕ್ಷೆ ಸುಮಂಗಳ ದೇವಾಡಿಗ, ಕಾಪು ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಎಂ. ವಾದಿರಾಜ ರಾವ್, ಪ್ರಭಾರ ಸಹಾಯಕ ಕೃಷಿ ಅಧಿಕಾರಿ ಪಿ. ಶೇಖರ್, ಪಶುವೈದ್ಯಾಧಿಕಾರಿ ಶಿವಪುತ್ರಯ್ಯ ಗುರುಸ್ವಾಮಿ, ಪಿಡಿಒ ಸತೀಶ್ ಆರ್.ಜಿ ವೇದಿಕೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News