ಕಸಾಪ ಪುತ್ತೂರು ತಾಲೂಕು ಅಧ್ಯಕ್ಷರಾಗಿ ಐತ್ತಪ್ಪ ನಾಯ್ಕ್
ಪುತ್ತೂರು: ಕನ್ನಡ ಸಾಹಿತ್ಯ ಪರಿಷತ್ ನ ಪುತ್ತೂರು ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ನಿವೃತ್ತ ಮುಖ್ಯಗುರು ಬಿ.ಐತ್ತಪ್ಪ ನಾಯ್ಕ್ ನೇಮಕಗೊಂಡಿದ್ದಾರೆ.
ಅಧ್ಯಕ್ಷರ ನೇಮಕ ಪ್ರಕ್ರಿಯೆ ಭಾನುವಾರ ಪುತ್ತೂರಿನ ಅನುರಾಗ ವಠಾರದಲ್ಲಿ ನಡೆಯಿತು. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷರ ಆಯ್ಕೆಯನ್ನು ಘೋಷಿಸಿದರು.
ಗೌರವ ಕಾರ್ಯದರ್ಶಿಗಳಾಗಿ ವಿವೇಕಾನಂದ ಕಾಲೇಜ್ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್.ಜಿ. ಶ್ರೀಧರ್ ಮತ್ತು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಗುರು ಸರೋಜಿನಿ, ಕೋಶಾಧಿಕಾರಿಯಾಗಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಎನ್.ಕೆ. ಜಗನ್ನಿವಾಸ್ ರಾವ್ ಅವರನ್ನು ನೇಮಿಸಲಾಯಿತು.
ಸದಸ್ಯರಾಗಿ ನಿಕಟಪೂರ್ವ ಅಧ್ಯಕ್ಷ ಡಾ. ವರದರಾಜ ಚಂದ್ರಗಿರಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ಶಶಿಧರ್, ನಿವೃತ್ತ ಶಿಕ್ಷಕ ಕುಮಾರ್ ಕೆ. ವತ್ಸಲಾರಾಜ್ಞಿ, ಅಬ್ರಹಾಂ ವರ್ಗೀಸ್, ನಾರಾಯಣ ಭಟ್ ಟಿ, ಅಬೂಬಕ್ಕರ್ ಆರ್ಲಪದವು, ಭಾಸ್ಕರ ಬಾರ್ಯ, ಜೊಹರಾ ನಿಸಾರ್, ಝೇವಿಯರ್ ಡಿ'ಸೋಜ ಆಯ್ಕೆಯಾದರು.
ಹಿರಿಯ ಸಾಹಿತಿ ಪ್ರೊ.ವಿ.ಬಿ. ಅರ್ತಕಜೆ ಮತ್ತು ಮಕ್ಕಳ ಮಂಟಪದ ಡಾ.ಎನ್.ಸುಕುಮಾರ್ ಉಪಸ್ಥಿತರಿದ್ದರು. ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್ ಸ್ವಾಗತಿಸಿದರು.