ವಿವಾದಗಳಿಗೆ ಸಚಿವರೇ ಉತ್ತರಿಸುತ್ತಾರೆ: ವಿ.ಎಸ್. ಅಚ್ಯುತಾನಂದನ್
ತಿರುನಂತಪುರಂ, ಜೂನ್ 13: ಸರಕಾರಕ್ಕೆ ಸಂಬಂಧಿಸಿದ ವಿವಾದಗಳಲ್ಲಿ ಸಚಿವರು ಉತ್ತರ ನೀಡಲಿದ್ದಾರೆ ಎಂದು ಹಿರಿಯ ಸಿಪಿಎಂ ನಾಯಕ ವಿ.ಎಸ್. ಅಚ್ಯುತಾನಂದನ್ ಹೇಳಿದ್ದಾರೆ. ತನಗೆ ಸಿಗಲಿರುವ ಸ್ಥಾನಮಾನಗಳ ಕುರಿತು ಆಮೇಲೆ ಹೇಳುವೆ ಎಂದು ಪತ್ರಕರ್ತರಿಗೆ ತಿಳಿಸಿದ್ದಾರೆ.ಶಾಸಕರ ಹಾಸ್ಟೆಲ್‌ನಲ್ಲಿ ಹೊಸ ಕಚೇರಿಯನ್ನುಆರಂಭಿಸಿದ ನಂತರ ಅವರು ಪತ್ರಕರ್ತರನ್ನು ಉದ್ದೇಶಿಸಿ ಮಾತಾಡುತ್ತಿದ್ದರು.
ಸರಕಾರದ ಅಭಿವೃದ್ಧಿ ಯೋಜನೆಗಳ ಕುರಿತ ಪ್ರಶ್ನೆಗೆ ಮತ್ತು ರಾಷ್ಟ್ರೀಯ ಹೆದ್ದಾರಿ 45 ಮೀಟರಿಗೇರಿಸುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಘೋಷಣೆಗೆ ಸಂಬಂಧಿಸಿ ಅಚ್ಯುತಾನಂದನ್ ಒಂದೂ ಮಾತನ್ನು ಆಡಲಿಲ್ಲ.
ಹಾಸ್ಟೆಲ್‌ನ ರೂಂ ನಂಬರ್ 1 ಡಿ ಯಲ್ಲಿ ಅಚ್ಯುತಾನಂದನ್ ಹೊಸ ಕಚೇರಿ ತೆರೆದಿದ್ದಾರೆ. ಬೆಳಗ್ಗೆ ಹನ್ನೊಂದು ಗಂಟೆಗೆ ಕಚೇರಿ ಕೆಲಸ ಆರಂಭಿಸಿದೆ.
ಮಲಂಬುಝ ಶಾಸಕರಾದ ವಿಎಸ್ ಅಚ್ಯುತಾನಂದನ್‌ರಿಗೆ ಹಾಸ್ಟೆಲ್‌ನ ನಯ್ಯರ್ ಬ್ಲಾಕ್‌ನಲ್ಲಿ ಫ್ಲಾಟ್‌ನ್ನು ನೀಡಲಾಗಿದೆ. ಪ್ರತಿಪಕ್ಷ ನಾಯಕ ಅಥವಾ ಮುಖ್ಯಮಂತ್ರಿ ಅಲ್ಲದಿರುವುದರಿಂದ ಈ ಸಲ ವಿಎಸ್‌ರಿಗೆ ಫ್ಲಾಟ್‌ಗೆ ಮನವಿ ಮಾಡಬೇಕಾಯಿತು.