×
Ad

ಬಾಬಾ ರಾಮ್‌ದೇವ್ ಯೋಗ ಕಾರ್ಯಕ್ರಮದಲ್ಲಿ ಕೈಕೊಟ್ಟ ವಿದ್ಯುತ್: ಎಕ್ಸಿಕ್ಯೂಟಿವ್ ಇಂಜಿನಿಯರನ ಅಮಾನತು!

Update: 2016-06-13 16:38 IST

ಪಂಚಕುಲ, ಜೂನ್ 13: ಯೋಗ ಗುರು ಬಾಬಾರಾಮ್‌ದೇವ್‌ರ ಪಂಚಕುಲ ಶಿಬಿರದ ಉದ್ಘಾಟನೆ ಸಂದರ್ಭದಲ್ಲಿ ಮೂರು ಬಾರಿ ವಿದ್ಯುತ್ ಹೋಗಿದ್ದನ್ನು ಪರಿಗಣಿಸಿ ಹರ್ಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ಅಧಿಕಾರಿಯನ್ನು ಅಮಾನತುಗೊಳಿಸಿ ತನ್ನ ಕೋಪವನ್ನು ತೀರಿಸಿಕೊಂಡಿದ್ದಾರೆ. ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ವಿದ್ಯುತ್ ತೊಂದರೆ ಆಗದಂತೆ ನೋಡಿಕೊಳ್ಳದಿದ್ದದ್ದಕ್ಕಾಗಿ ಎಕ್ಸಿಕ್ಯೂಟಿವ್ ಇಂಜಿನಿಯರ್‌ರನ್ನುಅಮಾನತುಗೊಳಿಸಿದ್ದಾರೆ.

 ಪಂಚಕುಲ ಸೆಕ್ಟರ್ 5ರಲ್ಲಿರುವ ಪೆರೇಡ್ ಗ್ರೌಂಡ್‌ನಲ್ಲಿ ಮಂತ್ರಿಗಳು ಹಾಗೂ ರಾಜ್ಯದ ಇತರ ಗಣ್ಯರು ಯೋಗ ಮಾಡಲು ರವಿವಾರ ಬೆಳಗ್ಗೆ ಬಂದಿದ್ದರು. ಈ ಸಂದರ್ಭದಲ್ಲಿ ವಿದ್ಯುತ್ ನಿಂತ ಪರಿಣಾಮವಾಗಿ ಸೌಂಡ್ ಸಿಸ್ಟಮ್ ಹಾಳಾಗಿತ್ತು, ಸ್ಥಳದಲ್ಲಿ ಇರಿಸಿದ್ದ ದೊಡ್ಡ ದೊಡ್ಡ ಸ್ಕ್ರೀನ್‌ಗಳು ನಿಷ್ಕ್ರಿಯವಾಗಿದ್ದವು. ಇದಕ್ಕಾಗಿ ಉತ್ತರ ಹರಿಯಾಣದ ವಿದ್ಯುತ್ ನಿಗಮದ ಕರ್ತವ್ಯವಹಿಸಿಕೊಂಡಿರುವ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

 " ನಾನು ಎಕ್ಸಿಕ್ಯೂಟಿವ್ ಇಂಜಿನಿಯರ್‌ರನ್ನು ಅಮಾನತು ಗೊಳಿಸಲು ಶಿಫಾರಸು ಮಾಡಿದ್ದೇನೆ, ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಅದು ಅವರ ಜವಾಬ್ದಾರಿಯಲ್ಲಿ ನಡೆಯಬೇಕಾದ್ದಾಗಿದ್ದು ಹಾಗೆ ಆಗದಿರುವುದಕ್ಕಾಗಿ ಅವರನ್ನು ಅಮಾನತಿಗೆ ಶಿಫಾರಸು ಮಾಡಿದ್ದೇನೆ. ಉಪಕಮಿಶನರ್‌ನನಗೆ ಈ ಅಧಿಕಾರಿ ಸರಿಯಾಗಿ ಕೆಲಸಮಾಡುತ್ತಿಲ್ಲ ಎಂದು ತಿಳಿಸಿದ್ದರು" ಎಂದು ವಿಜ್ ಹೇಳಿದ್ದರೆ ಉಪಕಮಿಶನರ್ ಗರಿಮಾ ಮಿತ್ತಲ್ ಯಾವುದೇ ಹೇಳಿಕೆ ನೀಡಲು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News