ವಿಮಾನ ಪ್ರಯಾಣಿಕರಿಗೆ ಶುಭ ಸುದ್ದಿ
ಸರ್ಕಾರವು ವೈಮಾನಿಕ ಪ್ರಯಾಣದ ಟಿಕೆಟ್ ರದ್ದತಿ ಶುಲ್ಕ, ವಿಮಾನ ಪ್ರಯಾಣವನ್ನು ಕೊನೆ ಕ್ಷಣದಲ್ಲಿ ರದ್ದು ಮಾಡಬೇಕಾದಾಗ ನೀಡುವ ಪರಿಹಾರ ಮತ್ತು ಹೆಚ್ಚುವರಿ ಬ್ಯಾಗೇಜ್‌ಗೆ ನೀಡುವ ಶುಲ್ಕದ ಮೇಲೆ ನಿಗಾ (ಕ್ಯಾಪ್) ಇಡುವ ಪ್ರಸ್ತಾಪವನ್ನು ಪರಿಶೀಲಿಸುತ್ತಿರುವ ಕಾರಣ ವಿಮಾನಯಾನಿಳಿಗೆ ಖುಷಿಪಡುವ ಅವಕಾಶ ಸಿಗಲಿದೆ.
ನಾಗರಿಕ ವಿಮಾನಯಾನ ಸಚಿವಾಲಯವು ಹಲವು ಪ್ರಯಾಣಿಕರಿಗಿ ಕೇಂದ್ರಿತ ಕ್ರಮಗಳ ಸಲಹೆ ನೀಡಿದೆ. ವಿಮಾನ ರದ್ದು ಮಾಡಿದ ಪಕ್ಷದಲ್ಲಿ ವಿಮಾನಯಾನ ಸಂಸ್ಥೆಗಳು ಎಲ್ಲಾ ಶಾಸನೋಕ್ತ ತೆರಿಗೆಗಳನ್ನು ರಿಫಂಡ್ (ಮರುಪಾವತಿ) ಮಾಡಬೇಕಿದೆ. ಯಾವುದೇ ಸ್ಥಿತಿಯಲ್ಲೂ ರದ್ದತಿ ಶುಲ್ಕಗಳು ಮೂಲ ದರಕ್ಕಿಂತ (ಬೇಸಿಕ್ ಫೇರ್) ಹೆಚ್ಚಾಗಿರಬಾರದು ಮತ್ತು ಮರುಪಾವತಿಗೆ ಸಂಸ್ಥೆಗಳು ಹೆಚ್ಚುವರಿ ಶುಲ್ಕ ವಿಧಿಸುವಂತಿಲ್ಲ ಎಂದು ವಾಯುಯಾನ ನಿಯಂತ್ರಕ ಡಿಜಿಸಿಎ ಹೇಳಿದೆ.
ವಿಮಾನ ರದ್ದತಿಯನ್ನು ಪ್ರಯಾಣದ 24 ಗಂಟೆಗಳೊಳಗೆ ಸೂಚನೆ ನೀಡಿದಲ್ಲಿ ಪರಿಹಾರದ ಮೊತ್ತವನ್ನು ರು. 10,000ದವರೆಗೆ ಏರಿಸಲಾಗಿದೆ. ಇದಲ್ಲದೆ, ಮರುಪಾವತಿಗಳು ಎಲ್ಲಾ ದರಗಳ ಮೇಲೂ, ಪ್ರಾಯೋಜಿತ ಮತ್ತು ವಿಶೇಷ ದರ ಸೇರಿದಂತೆ ಅನ್ವಯಿಸಲಿದೆ. ಈ ಮರುಪಾವತಿಯನ್ನು ನಗದಾಗಿ ಪಡೆಯಬೇಕೆ ಅಥವಾ ಕ್ರೆಡಿಟ್ ಆಗಿ ಪಡೆದುಕೊಳ್ಳಬೇಕೆ ಎಂದು ಪ್ರಯಾಣಿಕನೇ ನಿರ್ಧರಿಸುತ್ತಾನೆ.
ಚೆಕ್ ಇನ್ ಮಾಡಿದ ಬ್ಯಾಗೇಜುಗಳಲ್ಲಿ ಹೆಚ್ಚುವರಿ ಇದ್ದಾಗ 15 ಕೇಜಿಯಿಂದ 20 ಕೇಜಿ ತೆಗೆದುಕೊಂಡು ಹೋದಾಗ ವೈಮಾನಿಕ ಸಂಸ್ಥೆಗಳು ಪ್ರತೀ ಕೇಜಿಗೆ ರು.100 ದರ ವಿಧಿಸಬಹುದು. ಪ್ರಸ್ತುತ 15 ಕೇಜಿ ಮಿತಿಯ ಮೇಲೆ ಪ್ರತೀ ಕೇಜಿಗೆ ವಿಧಿಸುವ ದರ ರು. 300 ಇದೆ. ಕೇವಲ ಏರ್ ಇಂಡಿಯಾ 23 ಕೇಜಿವರೆಗೆ ಉಚಿತ ಬ್ಯಾಗೇಜ್ ಅವಕಾಶ ಕೊಟ್ಟಿದೆ. ಮುಖ್ಯವಾಗಿ ಓವರ್ ಬುಕಿಂಗ್ ಕಾರಣ ಬೋರ್ಡಿಂಗ್ ನಿರಾಕರಿಸಿದರೆ ಪರಿಹಾರವಾಗಿ ರು. 20,000ವನ್ನು ಕೆಲವು ಸಂದರ್ಭಗಳಲ್ಲಿ ಕೊಡಬೇಕಾಗಿ ಬರಬಹುದು. ಅಲ್ಲದೆ ಕಡಿಮೆ ಸಂಚಾರದ ಮೂಲಕ ಪ್ರಯಾಣಿಕರಿಗೆ ನೆರವಾಗಲು ಸಚಿವಾಲಯ ಪ್ರಸ್ತಾಪ ಮುಂದಿಟ್ಟಿದೆ. ಪ್ರಯಾಣಿಕರ ದೂರುಗಳನ್ನು ಆಲಿಸಿದ ಮೇಲೆ ಮತ್ತು ವಿಷಯಗಳು ಸೂಕ್ತ ಸಮಯದೊಳಗೆ ಪರಿಹಾರವಾಗದೆ ಇರುವುದು ಕಂಡು ಈ ಪ್ರಸ್ತಾಪಗಳನ್ನು ಮುಂದಿಡಲಾಗಿದೆ ಎಂದು ನಾಗರಿಕ ವಾಯುಯಾನ ಸಚಿವರಾದ ಅಶೋಕ್ ಗಜಪತಿ ರಾಜು ಅವರು ಹೇಳಿದ್ದಾರೆ.
ಹೊಸ ಕ್ರಮಗಳನ್ನು ಮುಂದಿಡಲು ಡಿಜಿಸಿಎ ಮೂರು ನಾಗರಿಕ ವಾಯುಯಾನ ಅಗತ್ಯಗಳು ಮತ್ತು ಏರ್ ಟ್ರಾನ್ಸಪೋರ್ಟ್ ಸರ್ಕ್ಯುಲರ್‌ಗೆ ಮೂರು ಬದಲಾವಣೆಗಳನ್ನು ಸೂಚಿಸಿದೆ. ಅಂತಿಮ ನಿರ್ಧಾರ ಕೈಗೊಳ್ಳುವ ಮೊದಲು ಅವುಗಳನ್ನು ಸಾರ್ವಜನಿಕರ ಅಹವಾಲಿಗಾಗಿ ಮುಂದಿಡಲಾಗುವುದು.
ಜನವರಿ-ಮಾರ್ಚ್ ಅವಧಿಯಲ್ಲಿ 10 ಭಾರತೀಯ ವಿಮಾನ ಸಂಸ್ಥೆಗಳ 18,512 ವಿಮಾನಗಳು ವಿಳಂಬವಾಗಿವೆ. ಇದರಲ್ಲಿ ಅಗ್ಗದ ವಿಮಾನ ಇಂಡಿಗೋ ಒಂದರಲ್ಲೇ 5,426 ವಿಮಾನಗಳು ವಿಳಂಬವಾಗಿವೆ. ನಂತರದ ಸ್ಥಾನದಲ್ಲಿ ಜೆಟ್ ಏರ್ ವೇಸ್ ನ 5,040 ವಿಮಾನಗಳು ವಿಳಂಬಗೊಂಡಿವೆ. ರಾಷ್ಟ್ರೀಯ ವೈಮಾನಿಕ ಸಂಸ್ಥೆಯಾದ ಏರ್ ಇಂಡಿಯಾದ 3,111 ವಿಮಾನಗಳು ವಿಳಂಬಗೊಂಡಿವೆ. ಕಡಿಮೆ ವೆಚ್ಚದ ದೇಶಿ ವಿಮಾನ ಸಂಸ್ಥೆ ಸ್ಪೈಸ್ ಜೆಟ್‌ನ 2,205 ವಿಮಾನಗಳು ವಿಳಂಬವಾಗಿವೆ.
ಕೃಪೆ:www.hindustantimes.com