×
Ad

ಸುಳ್ಯ: ಕೆಸರುಮಯವಾದ ಕುರುಂಜಿಗುಡ್ಡೆ ರಸ್ತೆ

Update: 2016-06-13 17:51 IST

ಸುಳ್ಯ, ಜೂ.13: ಸುಳ್ಯದ ಕುರುಂಜಿಗುಡ್ಡೆಯಲ್ಲಿ ರಸ್ತೆ ಚರಂಡಿ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ರಸ್ತೆ ಕೆಸರುಮಯವಾಗಿದ್ದು, ವಾಹನ ಸಂಚಾರಕ್ಕೆ ತೊಡಕಾಗಿದೆ.

ಕುರುಂಜಿಬಾಗ್‌ನಿಂದ ಭಸ್ಕಡ್ಕ ಕಡೆಗೆ ಹೋಗುವ ರಸ್ತೆ ಕುರುಂಜಿಗುಡ್ಡೆಯಲ್ಲಿ ತಿರುವು ಪಡೆದಿದ್ದು, ಚರಂಡಿಗೆ ಕಾಂಕ್ರೀಟ್ ಕಾಮಗಾರಿ ಆರಂಭವಾಗಿತ್ತು. ಸ್ಥಳೀಯರೊಬ್ಬರು ಚರಂಡಿಯೊಂದಿಗೆ ಆವರಣಗೋಡೆಯನ್ನು ನಿರ್ಮಿಸಲು ಅದೇ ಗುತ್ತಿಗೆದಾರರಿಗೆ ನೀಡಿದ್ದು, ರಸ್ತೆ ಅತಿಕ್ರಮಣ ಆಗಿದೆ ಎಂದು ಸಹಾಯಕ ಕಮೀಷನರ್‌ಗೆ ದೂರು ಹೋಗಿ ಕಾಮಗಾರಿ ಸ್ಥಗಿತವಾಗಿದೆ.

ಕಳೆದ ಮೂರು ತಿಂಗಳಿನಿಂದ ಕಾಮಗಾರಿ ನಡೆಯದೇ ಮಳೆ ಬಂದು ರಸ್ತೆ ಕೆಸರುಮಯವಾಗಿದೆ. ಅಲ್ಲದೆ ಕೆವಿಜಿ ಐಟಿಐ ಬಳಿಯ ರಸ್ತೆಯೂ ಕಾಮಗಾರಿಗೆ ಮುಚ್ಚಿರುವುದರಿಂದ ಈ ರಸ್ತೆಯಲ್ಲಿ ವಾಹನಗಳ ಓಡಾಟವೂ ಹೆಚ್ಚಾಗಿದೆ. ತಕ್ಷಣ ಕಾಮಗಾರಿ ಮುಗಿಸಿ ಸುಗಮ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News