×
Ad

ಎನ್‌ಎಸ್‌ಜಿ ಸೇರ್ಪಡೆಗೆ ಭಾರತಕ್ಕಿಂತ ಪಾಕ್ ಹೆಚ್ಚು ಅರ್ಹ: ಸರ್ತಾಝ್ ಅಝೀಝ್

Update: 2016-06-13 20:08 IST

ಇಸ್ಲಾಮಾಬಾದ್, ಜೂ. 13: ಪರಮಾಣು ಪ್ರಸರಣ ನಿಷೇಧ (ಎನ್‌ಪಿಟಿ) ಒಪ್ಪಂದಕ್ಕೆ ಸಹಿ ಹಾಕದ ದೇಶಗಳು ಪರಮಾಣು ಪೂರೈಕೆದಾರರ ಗುಂಪಿ (ಎನ್‌ಎಸ್‌ಜಿ)ಗೆ ಸೇರ್ಪಡೆಗೊಳ್ಳಲು ಸಮಾನ ಮಾನದಂಡಗಳನ್ನು ಎನ್‌ಎಸ್‌ಜಿ ರೂಪಿಸಿದರೆ, 48 ದೇಶಗಳ ಈ ಗುಂಪಿಗೆ ಸೇರಲು ಭಾರತಕ್ಕಿಂತ ಹೆಚ್ಚಿನ ಅರ್ಹತೆಯನ್ನು ಪಾಕಿಸ್ತಾನ ಹೊಂದಿದೆ ಎಂದು ಪಾಕಿಸ್ತಾನದ ಪ್ರಧಾನಿಯ ವಿದೇಶ ವ್ಯವಹಾರಗಳ ಕುರಿತ ಸಲಹಾಕಾರ ಸರ್ತಾಝ್ ಅಝೀಝ್ ಹೇಳಿದ್ದಾರೆ.

ಪಾಕಿಸ್ತಾನದ ಟಿವಿ ಚಾನೆಲ್ ‘ಡಾನ್ ನ್ಯೂಸ್’ಗೆ ರವಿವಾರ ಸಂದರ್ಶನವೊಂದನ್ನು ನೀಡಿದ ಅಝೀಝ್, ವಿವಿಧ ದೇಶಗಳೊಂದಿಗೆ ಪಾಕಿಸ್ತಾನ ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆಗಳನ್ನು ನಡೆಸುತ್ತಿದೆ ಎಂದರು.

ಎನ್‌ಎಸ್‌ಜಿಗೆ ಭಾರತ ಸೇರ್ಪಡೆಗೊಂಡರೆ, ಪಾಕಿಸ್ತಾನವೂ ತನ್ನ ಬಲವಾದ ಅರ್ಹತೆಗಳ ಹಿನ್ನೆಲೆಯಲ್ಲಿ ಈ ವಿಷಯದಲ್ಲಿ ಹಿಂದುಳಿಯಲಾರದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News