×
Ad

ಉಳ್ಳಾಲ: ಬಾಲಕನಿಗೆ ಲೈಂಗಿಕ ಕಿರುಕುಳ

Update: 2016-06-13 20:24 IST

ಉಳ್ಳಾಲ, ಜೂ. 13: ಗುಜರಿ ಹೆಕ್ಕುವ ವ್ಯಾಪಾರಿಯೊಬ್ಬ ಮನೆಯೊಂದರಲ್ಲಿ ಒಂಟಿಯಾಗಿದ್ದ ಅಪ್ರಾಪ್ತ ಬಾಲಕನೋರ್ವನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾಗ ಸ್ಥಳೀಯರು ಆತನನ್ನು ಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ ಘಟನೆ ಸೋಮವಾರ ನಡೆದಿದೆ.

ದೇರಳಕಟ್ಟೆಯ ರೆಂಜಾಡಿ ಮಸೀದಿ ಬಳಿಯ ನಿವಾಸಿ ಮುಹಮ್ಮದ್ ಅಶ್ರಫ್(32)ಎಂಬಾತನೇ ಬಂಧಿತ ಆರೋಪಿ.

ಈತ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ನೆಹರುನಗರ ಪ್ರದೇಶದಲ್ಲಿ ಗುಜರಿ ಖರೀದಿಸಲು ತಿರುಗುತ್ತಿದ್ದಾಗ, ಮನೆಯೊಂದರಲ್ಲಿ ಒಂಟಿಯಾಗಿದ್ದ 11 ವರುಷದ ಬಾಲಕ ಗುಜರಿ ಇದೆಯೆಂದು ಅಶ್ರಫ್‌ನನ್ನು ಮನೆಗೆ ಕರೆದಿದ್ದಾನೆ.

ಮನೆಯ ಹಿಂದೆ ಗುಜರಿ ಹೆಕ್ಕುತ್ತಿದ್ದ ಅಶ್ರಫ್‌ನನ್ನು ನೋಡಲು ತೆರಳಿದ ಬಾಲಕನನ್ನು ಹಿಡಿದು ಬಲವಂತವಾಗಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಬಾಲಕ ಬೊಬ್ಬಿಟ್ಟಾಗ ದೌಡಾಯಿಸಿದ ಸ್ಥಳೀಯರು ವಿಕೃತ ಕಾಮಿಗೆ ನಾಲ್ಕು ತದುಕಿ ಉಳ್ಳಾಲ ಪೊಲೀಸರಿಗೆ ಹಸ್ತಾಂತರಿಸಿದ್ದು, ಅಶ್ರಫ್ ವಿರುದ್ಧ ಪೊಕ್ಸೊ ಪ್ರಕರಣ ದಾಖಲಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News