×
Ad

ಮೂಡುಬಿದಿರೆ: 10 ಮರಳು ಸಾಗಾಟದ ಲಾರಿಗಳು ವಶಕ್ಕೆ

Update: 2016-06-13 20:42 IST

ಮೂಡುಬಿದಿರೆ, ಜೂ.13: ಕಂದಾಯ, ಅರಣ್ಯ ಮತ್ತು ಪೊಲೀಸ್ ಇಲಾಖೆಯ ಸಂಯುಕ್ತ ನೇತೃತ್ವದಲ್ಲಿ ರವಿವಾರ ಹಾಗೂ ಸೋಮವಾರ ಸ್ವರಾಜ್ಯ ಮೈದಾನ ಹಾಗೂ ಬನ್ನಡ್ಕದಲ್ಲಿ ಮರಳು ಸಾಗಾಟದ ವಾಹನಗಳನ್ನು ತಪಾಸಣೆ ನಡೆಸಿ ಒಟ್ಟು 10 ಲಾರಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
 
ವಶಪಡಿಸಲಾದ ಮರಳು ಸಾಗಾಟದ ಲಾರಿಗಳಲ್ಲಿ ಮರಳು ಸಾಗಾಣಿಕೆ ಪರವಾನಿಗೆ ಹೊಂದಿದ್ದರೂ ಅದರ ನೈಜತೆಯ ಬಗ್ಗೆ ಅಧಿಕಾರಿಗಳಿಗೆ ಸಂಶಯ ಕಂಡುಬಂದ ಹಿನ್ನಲೆಯಲ್ಲಿ ಅವುಗಳ ಪರಿಶೀಲನೆಗೆ ಕ್ರಮ ಕೈಗೊಳ್ಳಲು ಹಾಗೂ ಅಧಿಕ ಭಾರ ಹೊತ್ತ ಲಾರಿಗಳಿಗೆ ದಂಡ ವಿಧಿಸಲು ಜಿಲ್ಲಾಧಿಕಾರಿಗಳಿಗೆ ವಿವರ ಸಲ್ಲಿಸಿದ್ದು, ಅವರ ನಿರ್ದೇಶನದಂತೆ ಕ್ರಮಕೈಗೊಳ್ಳಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ವಶಪಡಿಸಿಕೊಂಡ ಲಾರಿಗಳನ್ನು ಮೂಡುಬಿದಿರೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News