ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಸಿಎಫ್‌ಎಎಲ್ ವಿದ್ಯಾರ್ಥಿಗಳಿಂದ ಸಾಧನೆ

Update: 2016-06-13 15:39 GMT

ಮಂಗಳೂರು, ಜೂ.13:ನಗರದ ಸೆಂಟರ್ ಾರ್ ಅಡ್ವಾನ್ಸ್‌ಡ್ ಲರ್ನಿಂಗ್(ಸಿಎ್ಎಎಲ್)ನಲ್ಲಿ ತರಬೇತಿ ಪಡೆದ ಇಬ್ಬರು ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದ ಪ್ರತಿಷ್ಟಿತ ಜೆಇಇ ಪರೀಕ್ಷೆಯಲ್ಲಿ ಸಾಧನೆ ತೋರಿದ್ದಾರೆ.

ಕೆನ್ರಿಕ್ ಪಿಂಟೋ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ 203ನೇ ರ್ಯಾಂಕ್ ಮತ್ತು ಧನುಷ್ ಕೃಷ್ಣ 313ನೇ ರ್ಯಾಂಕ್ ಗಳಿಸಿದ್ದಾರೆ ಎಂದು ಸೆಂಟರ್ ಾರ್ ಅಡ್ವಾನ್ಸ್‌ಡ್ ಲರ್ನಿಂಗ್‌ನ ಪ್ರಾಂಶುಪಾಲ ಸೆವೆರಿನ್ ರೊಸಾರಿಯೊ ಹೇಳಿದರು.

ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆನ್ರಿಕ್ ಪಿಂಟೊ ಮೂಡುಬಿದಿರೆ ಎಸ್‌ಎನ್‌ಎಂ ಪಾಲಿಟೆಕ್ನಿಕ್‌ನ ಪ್ರಾಂಶುಪಾಲರಾದ ಜೆ.ಜೆ. ಪಿಂಟೋ ಹಾಗೂ ಅದೇ ಕಾಲೇಜಿನ ಪ್ರಾಧ್ಯಾಪಕಿ ತರೀನಾ ಪಿಂಟೋ ದಂಪತಿಯ ಪುತ್ರ. ಈತ ಜೆಇಇ ಮೈನ್ಸ್ ಪ್ರವೇಶ ಪರೀಕ್ಷೆಯಲ್ಲಿ 360ರಲ್ಲಿ 293 ಅಂಕಗಳನ್ನು ಗಳಿಸುವ ಮೂಲಕ ಸಾಧನೆ ತೋರಿದ್ದಾರೆ. ಎನ್‌ಟಿಎಸ್‌ಇಯಲ್ಲಿ ಎರಡನೇ ರ್ಯಾಂಕ್, ಕೆವಿಪಿವೈಯಲ್ಲಿ 16ನೇ ರ್ಯಾಂಕ್ ಗಳಿಸಿದ್ದರು ಎಂದು ಹೇಳಿದರು.

ಧನುಷ್ ಕೃಷ್ಣ ಎನ್‌ಐಒಎಸ್ ಬೋರ್ಡ್ ಪರೀಕ್ಷೆಯಲ್ಲಿ ಶೇ.93.4 ಅಂಕಗಳನ್ನು ಹಾಗೂ ಸಿಇಟಿಯಲ್ಲಿ 182ನೆ ರ್ಯಾಂಕ್ ಪಡೆದಿದ್ದರು.
ತಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರಿದ್ದಾರೆ. ರ್ಯಾಂಕ್ ಪಡೆದಿರುವುದಕ್ಕೆ ಹೆಮ್ಮೆಯಿದೆ. ಜೆಇಇ ಪರೀಕ್ಷೆಗೆ ಈ ಬಾರಿ ದೇಶಾದ್ಯಂತ ಸುಮಾರು 2ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅದರಲ್ಲಿ 36,566 ವಿದ್ಯಾರ್ಥಿಗಳು ಅರ್ಹತೆ ಗಳಿಸಿದ್ದಾರೆ. ಸಿಎ್ಎಎಲ್ ಸಂಸ್ಥೆ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವೇದಿಕೆ ನಿರ್ಮಿಸಿ ಕೊಡುತ್ತಿದೆ. ಅಲ್ಲದೆ ಹೆಚ್ಚಿನ ಸಾಧನೆ ತೋರಲು ಸೂಕ್ತವಾದ ತರಬೇತಿ ನೀಡುತ್ತಿದೆ ಎಂದು ಅವರು ಹೇಳಿದರು.

ಕೆನ್ರಿಕ್ ಪಿಂಟೋ ಅವರ ತಾಯಿ ತರಿನಾ ಪಿಂಟೋ, ಧನುಷ್ ಕೃಷ್ಣ ಅವರ ತಂದೆ ವಿಷ್ಣುಮೂರ್ತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News