ಬಾಂಗ್ಲಾ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ: 8,000 ಬಂಧನ
Update: 2016-06-13 21:53 IST
ಢಾಕಾ, ಜೂ. 13: ಅಲ್ಪಸಂಖ್ಯಾತರು ಮತ್ತು ಜಾತ್ಯತೀತವಾದದ ಬೆಂಬಲಿಗರ ಸರಣಿ ಹತ್ಯೆಗಳ ಹಿನ್ನೆಲೆಯಲ್ಲಿ, ಭಯೋತ್ಪಾದಕರ ವಿರುದ್ಧ ನಡೆಸಲಾದ ರಾಷ್ಟ್ರವ್ಯಾಪಿ ದಾಳಿಯಲ್ಲಿ 8,000ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ ಎಂದು ಬಾಂಗ್ಲಾದೇಶ ಪೊಲೀಸರು ಸೋಮವಾರ ಹೇಳಿದ್ದಾರೆ.
‘‘ಪ್ರತಿಯೊಬ್ಬ ಕೊಲೆಗಡುಕನನ್ನೂ ಹಿಡಿಯುವುದಾಗಿ’’ ಪ್ರಧಾನಿ ಶೇಖ್ ಹಸೀನಾ ಶನಿವಾರ ಪಣ ತೊಟ್ಟಿದ್ದರು.
ಕಳೆದ 24 ಗಂಟೆಗಳ ಅವಧಿಯಲ್ಲಿ 3,245 ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವಕ್ತಾರ ಕಮರುಲ್ ಅಹ್ಸಾನ್ ತಿಳಿಸಿದರು. ಇದರೊಂದಿಗೆ ಶುಕ್ರವಾರ ಕಾರ್ಯಾಚರಣೆ ಆರಂಭಗೊಂಡಂದಿನಿಂದ ಬಂಧನಕ್ಕೊಳಗಾದವರ ಸಂಖ್ಯೆ 8,192ಕ್ಕೆ ಏರಿದೆ.