×
Ad

ಮರಳುಗಾರಿಕೆ ಅಡ್ಡೆಗಳಿಗೆ ದಾಳಿ: 10 ಲಾರಿಗಳು ವಶಕ್ಕೆ

Update: 2016-06-13 22:00 IST

ಮಂಗಳೂರು,ಜೂ.13: ಮಂಗಳೂರು ತಾಲೂಕಿನ ವಿವಿಧೆಡೆ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಪ್ರದೇಶಗಳಿಗೆ ಅಧಿಕಾರಿಗಳು ದಾಳಿ ನಡೆಸಿ ಹತ್ತು ಮರಳು ತುಂಬಿದ ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಮರಳು ತುಂಬಿಸಿ ಸಾಗಾಟ ನಡೆಸುತ್ತಿದ್ದ ಲಾರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ. ಜೆಪ್ಪಿನಮೊಗರುವಿನಲ್ಲಿ ಮೂರು ಲಾರಿ, ತಲಪಾಡಿ ಕೆಸಿ ರೋಡ್‌ನಲ್ಲಿ ಒಂದು ಲಾರಿ, ಗುರುಪುರ ಹೋಬಳಿಯಲ್ಲಿ ಮೂರು ಲಾರಿ, ಸುರತ್ಕಲ್‌ನಲ್ಲಿ ಒಂದು ಲಾರಿ, ಕಣ್ಣೂರಿನಲ್ಲಿ 2 ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.

ಹೆಚ್ಚಿನ ಲಾರಿಗಳು ಪರ್ಮಿಟ್ ಆದೇಶವನ್ನು ಮೀರಿ ಮರಳು ಸಾಗಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News