×
Ad

ಪಡೀಲ್: ಸಿಲಿಂಡರ್ ಸ್ಫೋಟ; ಮನೆಗೆ ಅಪಾರ ಹಾನಿ

Update: 2016-06-13 23:24 IST

ಮಂಗಳೂರು,ಜೂ .13: ನಗರದ ಹೊರವಲಯದಲ್ಲಿರುವ ಪಡೀಲ್ ಬಳಿಯ ಅಳಪೆ ಮಂಜಲಿಕೆ ಬಳಿ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಸುಮಾರು 2 ಲಕ್ಷ ರೂ ಗಳ ಸಾಮಾಗ್ರಿಗಳು ಹಾನಿಗೀಡಾಗಿದೆ.

ರಾತ್ರಿ ಸುಮಾರು 9:30 ರ ಸುಮಾರಿಗೆ ಕ್ಯಾಂಪ್ಕೋ ಕ್ವಾಟ್ರಸ್‌ನಲ್ಲಿರುವ ಉಮೇಶ್ ಎಂಬವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದೆ. ಆದರೆ ಅಪಾಯ ಗ್ರಹಿಸಿದ ಮನೆಯವರು ಹೊರಗೆ ಬಂದ ಕಾರಣದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಪೋಟಕ್ಕೆ ಗ್ಯಾಸ್ ಸಿಲಿಂಡರ್ ಸಂಪೂರ್ಣ ಸಿಡಿದು ಹೋಗಿದ್ದು ಅಡುಗೆ ಕೋಣೆಯ ಹೆಚ್ಚಿನ ವಸ್ತುಗಳು ಹಾನಿಯಾಗಿದೆ. ಮಿಕ್ಸಿ, ಗ್ರೈಂಡರ್‌ಗಳು ಜಖಂಗೊಂಡಿದೆ. ಮನೆಯ ಎಲ್ಲಾ ಕಿಟಕಿಗಳ ಗಾಜುಗಳು ಹಾನಿಗೀಡಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News