ರಿಂಗಿಂಗ್ ಬೆಲ್ಸ್‌ನ ಫ್ರೀಡಮ್ ಮೊಬೈಲ್ ಜೂನ್ ತಿಂಗಳಲ್ಲಿ ಲಭ್ಯ ?
ಹೊಸದಿಲ್ಲಿ,ಜೂನ್ 14: ಈಗಾಗಲೇ ವಿವಾದದಲ್ಲಿ ತೇಲಾಡುತ್ತಿರುವ ಮೊಬೈಲ್ ಹ್ಯಾಂಡ್ ಸೆಟ್ ನಿರ್ಮಾಣದ ಕಂಪೆನಿ ರಿಂಗಿಂಗ್ ಬೆಲ್ಸ್ ಜೂನ್ 28ಕ್ಕೆ ತನ್ನ ಬಹುನಿರೀಕ್ಷೆಯ ಸ್ಮಾರ್ಟ್‌ಫೋನ್ ಯೋಜನೆಯಾದ ಫ್ರೀಡಂ 251 ಮೊಬೈಲ್‌ಗಳನ್ನು ಈಗಾಗಲೇ ಮುಂಗಡ ನೀಡಿ ಕಾದಿರಿಸಿದ ಗ್ರಾಹಕರಿಗೆ ಪೂರೈಸುವುದಾಗಿ ಹೇಳಿಕೆ ನೀಡಿದೆ.ಬಹಳಷ್ಟು ಮಂದಿ ಇದೊಂದು ಮೋಸದ ವ್ಯವಹಾರ ಎಂದು ಹೇಳಿದ್ದರು.
ಕಂಪೆನಿಯ ನಿರ್ದೇಶಕ ಮೋಹಿತ್ ಗೋಯಲ್ ಯೋಜನೆಯ ವಿರುದ್ಧ ಎದ್ದಿದ್ದ ಅಪಪ್ರಚಾರಗಳಿಗೆ ತೆರೆ ಎಳೆಯುವ ಉದೇಶವನ್ನು ಅವರು ಪ್ರಕಟಿಸಿದ್ದಾರೆ. "ಫ್ರೀಡಂ 251ನ್ನು ಜೂನ್ 28ರಿಂದ ನಗದು ಹಣ ನೀಡಿ ಮೊಬೈಲ್‌ಗಾಗಿ ಈಗಾಗಲೇ ನೋಂದಾಯಿಸಿರುವವವರಿಗೆ ಪೂರೈಸುತ್ತೇವೆ ಎಂದು ನಿರ್ದೇಶಕ ಮೋಹಿತ್ ಗೋಯಲ್ ಸ್ಪಷ್ಟಪಡಿಸಿದ್ದಾರೆ. ಕಂಪೆನಿ ಫೋನ್‌ನ ಮಾರಾಟವನ್ನು ಒಂದು ವೆಬ್‌ಸೈಟ್ ಮೂಲಕ ಮಾರಾಟ ಆರಂಭಿಸಿತ್ತಲ್ಲದೆ ತನ್ನದು ಜಗತ್ತಿನ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಎಂದೂ ಕಂಪೆನಿ ಹೇಳಿಕೊಂಡಿತ್ತು. ಆದರೆ ಉದ್ಯಮ ಜಗತ್ತು ಯೋಜನೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿತ್ತು.