×
Ad

ಕೋಡಿಜಾಲ್: ರಮಝಾನ್ ಕಿಟ್ ವಿತರಣೆ

Update: 2016-06-14 15:40 IST

ಕೊಣಾಜೆ, ಜೂ. 14: ಖಿದ್ಮತುಲ್ ಇಸ್ಲಾಂ ಅಸೋಸಿಯೇಷನ್ ಕೋಡಿಜಾಲ್ ಮತ್ತು ದಮ್ಮಾಮ್ ಘಟಕ ಹಾಗೂ ಜಂಇಯತುಲ್ ಫಲಾಹ್ ಮಂಗಳೂರು ಇದರ ಸಹಭಾಗಿತ್ವದಲ್ಲಿ ರಮಝಾನ್ ಕಿಟ್ ವಿತರಣಾ ಕಾರ್ಯಕ್ರಮವು ಜೂ.12ರಂದು ರಿಫಾಯೀ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.

ಮಸೀದಿಯ ಖತೀಬ್ ಹಾಜಿ ಅಬೂಬಕರ್ ಸಖಾಫಿ ದುಆ ನೆರವೇರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೂಡ ಹಾಗೂ ಕೋಡಿಜಾಲ್ ಮಸೀದಿಯ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಸಮಾಜದ ಬಡ, ಅನಾಥರ ಕಷ್ಟಗಳಿಗೆ ಸ್ಪಂದಿಸುವುದು ಪ್ರವಾದಿಯವರಿಗೆ ಅತ್ಯಂತ ಪ್ರಿಯವಾದ ಕಾರ್ಯವಾಗಿದೆ. ದಾನ-ಧರ್ಮಕ್ಕೆ ಇಸ್ಲಾಂನಲ್ಲಿ ಉನ್ನತ ಸ್ಥಾನವಿದೆ ಎಂದು ಎಂದು ಅಭಿಪ್ರಾಯಪಟ್ಟರು.

ಬಳಿಕ ಬಡ, ಅರ್ಹ ಫಲಾನುಭವಿಗಳಿಗೆ ರಮಝಾನ್ ಕಿಟ್ ವಿತರಿಸಿದರು.

ಈ ಸಂದರ್ಭದಲ್ಲಿ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಾಜಿ ಅಬೂಬಕರ್, ಕೋಶಾಧಿಕಾರಿ ಹಾಜಿ ಮುಹಮ್ಮದ್, ಕೋಡಿಜಾಲ್ ಖಿದ್ಮತುಲ್ ಇಸ್ಲಾಂ ಅಸೋಸಿಯೇಷನ್‌ನ ಅಧ್ಯಕ್ಷ ಅಮೀರ್ ಕೋಡಿಜಾಲ್, ಗೌರವಾಧ್ಯಕ್ಷ ಅಬ್ದುರ್ರಹ್ಮಾನ್ ಕೆ.ಎಂ. ಮತ್ತು ದಮ್ಮಾಮ್ ಘಟಕದ ಮಾಜಿ ಅಧ್ಯಕ್ಷ ಸೂಫಿ ಇಬ್ರಾಹೀಂ ಮತ್ತಿತರರು ಉಪಸ್ಥಿತರಿದ್ದರು.

ಮಸೀದಿಯ ಜೊತೆ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಕೆ.ಎಸ್. ಸ್ವಾಗತಿಸಿದರು. ಖಿದ್ಮತುಲ್ ಇಸ್ಲಾಂ ಅಸೋಸಿಯೇಷನ್‌ನ ಕಾರ್ಯದರ್ಶಿ ಶರೀಫ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News