ಕೈರಾನಾ ಘಟನೆಯ ಕೆಲವೇ ಗಂಟೆಗಳಲ್ಲಿ ಬಿಜೆಪಿ “ದಂಗೆ ನಡೆಸುವ ಸಂಚು” ನಡೆಸಿತ್ತು: ಮಾಯಾವತಿ
Update: 2016-06-14 16:40 IST
ಲಕ್ನೊ,ಜೂನ್ 15: ರಾಜ್ಯ ಸಭಾಚುನಾವಣೆಯಲ್ಲಿ ಬಿಜೆಪಿ ಖರೀದಿ ಅವ್ಯವಹಾರ ನಡೆಸಿದೆ ಹಾಗೂ ಸರಕಾರಿ ಹಣವನ್ನು ದುರುಪಯೋಗ ಪಡಿಸಿದೆ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಲಕ್ನೋದಲ್ಲಿ ಇಂದು ಹೇಳಿದ್ದಾರೆ. ಕೈರಾನಾ ಘಟನೆಯ ಕೆಲವೇ ಗಂಟೆಗಳಲ್ಲಿ ಬಿಜೆಪಿ “ದಂಗೆ ನಡೆಸುವ ಸಂಚು” ನಡೆಸಿತ್ತು. ಎಂದು ಸಹಾ ಹೇಳಿರುವ ಮಾಯಾವತಿ ಸಮಾಜವಾದಿ ಪಕ್ಷದ ಸರಕಾರದ ವಿರುದ್ಧವೂ ಟೀಕಾಪ್ರಹಾರ ನಡೆಸಿದ್ದಾರೆ.
ಬಿಎಸ್ಪಿ ಸರಕಾರ ಕೈರಾನಾ ಪ್ರಕರಣದ ಭುಗಿದೇಳಲು ಬಿಟ್ಟಿರಲಿಲ್ಲ. ಈಗ ಎಸ್ಪಿ ಸರಕಾರ ಏನೂ ಮಾಡುತ್ತಿಲ್ಲ. ಮಾಧ್ಯಮಗಳು ಈ ಪ್ರಕರಣವನ್ನು ನಿಭಾಯಿಸಿವೆ. ಇಡೀ ಪ್ರದೇಶದ ಜನರು ನಾಲ್ಕುವರ್ಷಗಳಿಂದ ಸಂಕಷ್ಟದಲ್ಲಿದ್ದಾರೆ. ಬಿಜೆಪಿಯೂ ಉತ್ತರಪ್ರದೇಶವನ್ನು ವಂಚಿಸಿದೆ ಎಂದು ಮಾಯಾವತಿ ಹೇಳಿದ್ದಾರೆ.