ಮಲ್ಯ ಘೋಷಿತ ಅಪರಾಧಿ
Update: 2016-06-14 17:28 IST
ಮುಂಬೈ ,ಜೂ.14: ಮದ್ಯದ ದೊರೆ ವಿಜಯ್ ಮಲ್ಯ ಘೋಷಿತ ಅಪರಾಧಿ ಎಂದು ಮುಂಬೈನ ವಿಶೇಷ ನ್ಯಾಯಾಲಯ ಇಂದು ಘೋಷಿಸಿದೆ.
ಜಾರಿ ನಿರ್ದೇಶನಾಲಯದ ಮನವಿ ಮೇರೆಗೆ ಕೋರ್ಟ್ ಆದೇಶ ನೀಡಿದೆ.
ಮಲ್ಯ ವಿವಿಧ ಬ್ಯಾಂಕುಗಳಿಗೆ ಭಾರೀ ಮೊತ್ತದ ಸಾಲ ಮರು ಪಾವತಿಸದೆ ಇಂಗ್ಲೆಂಡ್‌ಗೆ ಪರಾರಿಯಾಗಿದ್ದಾರೆ. ವಿಚಾರಣೆ ಹಾಜರಾಗದ ಮಲ್ಯರನ್ನು ಇದೀಗ ನ್ಯಾಯಾಲಯ ಘೋಷಿತ ಅಪರಾಧಿ ಎಂದು ಘೋಷಿಸಿದೆ.