ಪರಿಶಿಷ್ಟ ಜಾತಿ ಸೊಸೈಟಿ ಆರಂಭಕ್ಕೆ ಪೂರ್ವಭಾವಿ ಸಭೆ
Update: 2016-06-14 17:40 IST
ಸುಳ್ಯ, ಜೂ.14: ಸುಳ್ಯದಲ್ಲಿ ನೂತನವಾಗಿ ಆರಂಭವಾಗಲಿರುವ ಪರಿಶಿಷ್ಟ ಜಾತಿ ಸಮುದಾಯದವರ ಸಹಕಾರಿ ಸಂಘದ ಕುರಿತು ಪೂರ್ವಭಾವಿ ಸಭೆಯ ತಾ.ಪಂ. ಸಭಾಂಗಣದಲ್ಲಿ ನಡೆಯಿತು.
ನಿವೃತ್ತ ಶಿಕ್ಷಣ ಸಂಯೋಜಕ ಕೇಶವ ಮಾಸ್ತರ್ ಹೊಸಗದ್ದೆ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ, ಡಿಸಿ ಮನ್ನಾ ಹೋರಾಟ ಸಮಿತಿಯ ಅಧ್ಯಕ್ಷ ಅಚ್ಚುತ ಮಲ್ಕಜೆ, ತಾ.ಪಂ. ಮಾಜಿ ಅಧ್ಯಕ್ಷ ಶಂಕರ್ ಪೆರಾಜೆ, ನಿವೃತ್ತ ಪೋಸ್ಟ್ ಮಾಸ್ಟರ್ ನಂದರಾಜ್ ಸಂಕೇಶ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನೂತನ ಸಹಕಾರಿ ಸಂಘ ರಚನೆ ಮಾಡುವುದೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಇದಕ್ಕಾಗಿ 15 ಮಂದಿ ಪ್ರವರ್ತಕರನ್ನು ಆಯ್ಕೆ ಮಾಡಲಾಯಿತು.