ಸಾಂಬಾರ್‌ತೋಟ: ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ಸನ್ಮಾನ
ಕೊಣಾಜೆ, ಜೂ.14: ವಿಸ್‌ಡಮ್ ವೆಲ್ಫೇರ್ ಅಸೋಸಿಯೇಶನ್ ಮುಡಿಪು ಸಾಂಬಾರ್ ತೋಟ ವತಿಯಿಂದ ಸಾಂಬಾರ್‌ತೋಟದ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಸಾಂಬಾರ್ ತೋಟ ನೂರಾನಿಯಾ ಜುಮಾ ಮಸೀದಿ ಖತೀಬ್ ಪಿ.ಕೆ.ಮುಹಮ್ಮದ್ ಮದನಿ ದುಆ ನೆರವೇರಿಸಿದರು. ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ನವೀನ್ ಪಾದಲ್ಪಾಡಿ, ಉದ್ಯಮಿ ಪ್ರಶಾಂತ್ ಕಾಜವ, ನರಿಂಗಾನ ಶಾಲೆಯ ದೈಹಿಕ ಶಿಕ್ಷಕ ಪ್ರಭಾಕರ್ ಜೋಗಿ, ಸಾಂಬಾರ್ ತೋಟ ಶಾಲೆಯ ಮುಖ್ಯ ಶಿಕ್ಷಕಿ ಶೆಹನಾಝ್ ಪರ್ವಿನ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬೂಬಕರ್ ಕೊಡಕಲ್ಲು, ಎಚ್.ಎಂ. ಶಾಹುಲ್ ಹಮೀದ್, ಮೂಸಾಜಿ ಕಳ್ಳಿ ತೋಟ ಉಪಸ್ಥಿತರಿದ್ದರು.
ವಿಸ್ಡಮ್ ವೆಲ್ಫೇರ್ ಅಸೋಸಿಯೇಶನ್‌ನ ಅಧ್ಯಕ್ಷ ಶಾಹುಲ್ ಹಮೀದ್ ಪ್ರಾಸ್ತವಿಕವಾಗಿ ಮಾತನಾಡಿದರು. ಮುಹಮ್ಮದ್ ಅಸ್ಗರ್ ಸ್ವಾಗತಿಸಿದರು. ಎಸ್.ಎಚ್ ಅಬ್ದುಲ್ ಅಝಿಝ್ ಕಾರ್ಯಕ್ರಮ ನಿರೂಪಿಸಿದರು, ಅನೀಶ್ ವಂದಿಸಿದರು.