×
Ad

ಉಚ್ಚ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ಅಬ್ದುಲ್ ಸಲೀಂರಿಗೆ ಸನ್ಮಾನ

Update: 2016-06-14 18:59 IST

ಬಂಟ್ವಾಳ, ಜೂ.14: ಕರ್ನಾಟಕ ಉಚ್ಚ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡ ಅಬ್ದುಲ್ ಸಲೀಂರವರನ್ನು ಬಂಟ್ವಾಳ ವಕೀಲರ ಸಂಘದ ವತಿಯಿಂದ ಸಂಘದ ಕಚೇರಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ ಯು. ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಆರ್.ಮಹೇಶ್, ಸಹಾಯಕ ಸರಕಾರಿ ಅಭಿಯೋಜಕ ಎಂ.ಎಸ್.ಅಲಿ, ವಕೀಲರ ಸಂಘದ ಅಧ್ಯಕ್ಷ ವೆಂಕಟ್ರಮಣ ಶೆಣೈ, ಉಪಾಧ್ಯಕ್ಷ ಸುರೇಶ್ ಕುಮಾರ್ ನಾವೂರು, ಕಾರ್ಯದರ್ಶಿ ರಾಜಾರಾಮ ನಾಯಕ್, ಜೊತೆ ಕಾರ್ಯದರ್ಶಿ ವಿನೋದ, ಕೋಶಾಧಿಕಾರಿ ವೀರೇಂದ್ರ, ಹಿರಿಯ ವಕೀಲರಾದ ಎ.ಕೆ.ರಾವ್, ಅಬ್ದುಲ್ ಖಾದರ್, ರಮಾನಾಥ ಕಾರಂದೂರು, ಪುಂಡಿಕಾ ನಾರಾಯಣ ಟ್, ಆಶ್ವನಿ ಕುಮಾರ್ ರೈ, ರಮೇಶ್ ಉಪಾಧ್ಯಾಯ, ಹಾತಿಮ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News