×
Ad

ಬಂಟ್ವಾಳ: ರಿಕ್ಷಾ ಕಳವು; ದೂರು

Update: 2016-06-14 19:02 IST

ಬಂಟ್ವಾಳ, ಜೂ.14: ಸಿದ್ಧಕಟ್ಟೆ ಸೈಂಟ್ ಪ್ಯಾಟ್ರಿಕ್ ಚರ್ಚಿನ ಬಳಿ ನಿಲ್ಲಿಸಿದ್ದ ಆಟೊ ರಿಕ್ಷಾವೊಂದು ಕಳವಾಗಿರುವ ಘಟನೆ ನಡೆದಿದೆ. ಕುಕ್ಕಿಪಾಡಿ ಗ್ರಾಮದ ಮಾವಿನಕಟ್ಟೆ ನಿವಾಸಿ ಪ್ರಕಾಶ ಪೂಜಾರಿ ಎಂಬವರು ತನ್ನ ಬಜಾಜ್ ಆಟೊ ರಿಕ್ಷಾವನ್ನು ರವಿವಾರ ಸಂಜೆ ಸುಮಾರು ಐದು ಗಂಟೆಗೆ ಸಿದ್ಧಕಟ್ಟೆ ಚರ್ಚಿನ ಬಳಿ ನಿಲ್ಲಿಸಿ ಹೋಗಿದ್ದರು ಎನ್ನಲಾಗಿದೆ.

ಅವರು ಬಳಿಕ ರಾತ್ರಿ ಸುಮಾರು 10 ಗಂಟೆಗೆ ವಾಪಸ್ ಬಂದು ನೋಡಿದಾಗ ರಿಕ್ಷಾ ಕಳವಾಗಿರುವುದು ಗಮನಕ್ಕೆ ಬಂದಿದೆ ಎಂದು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News