ಬಂಟ್ವಾಳ: ಉಸ್ತುವಾರಿ ಸಚಿವರಿಂದ ಪರಿಹಾರಧನದ ಚೆಕ್ ವಿತರಣೆ
ಬಂಟ್ವಾಳ, ಜೂ.14: ತಾಲೂಕಿನಲ್ಲಿ ಕಳೆದ ತಿಂಗಳು ಭಾರೀ ಗಾಳಿ, ಮಳೆಯಿಂದ ಮನೆ ಮತ್ತು ತೋಟಗಾರಿಕಾ ಬೆಳೆಗೆ ಹಾನಿಗೀಡಾದ ಸಂತ್ರಸ್ತರಿಗೆ ಪ್ರಾಕೃತಿಕ ವಿಕೋಪದಡಿ ಒಟ್ಟು 12.18 ಲಕ್ಷ ರೂ. ಮೊತ್ತದ ಪರಿಹಾರಧನ ಚೆಕ್ಕನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ರವಿವಾರ ಸಂಜೆ ವಿತರಿಸಿದರು.
458 ಮಂದಿಗೆ ತೋಟಗಾರಿಕಾ ಬೆಳೆಹಾನಿ, 65 ಮಂದಿಗೆ ಪಕ್ಕಾ ಮನೆ ಭಾಗಶಃ ಹಾನಿ, ಐದು ಮಂದಿಗೆ ಕಚ್ಚಾ ಮನೆ ಭಾಗಶ: ಹಾನಿ ಹೀಗೆ ಪರಿಹಾರಧನ ಚೆಕ್ ವಿತರಿಸಿದರು.
ತೋಟಗಾರಿಕಾ ಬೆಳೆಹಾನಿಗೆ 9,19,406 ರೂ., ಪಕ್ಕಾ ಮನೆ ಭಾಗಶಃ ಹಾನಿಗೆ 2,83,850 ರೂ., ಕಚ್ಚಾ ಮನೆ ಹಾನಿಗೆ 14,800 ರೂ. ಹೀಗೆ ಈಗಾಗಲೇ ಒಟ್ಟು 50 ಲಕ್ಷಕ್ಕೂ ಮಿಕ್ಕಿ ಮೊತ್ತದ ಪರಿಹಾರಧನ ವಿತರಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ರಮಾನಾಥ ರೈ ತಿಳಿಸಿದರು.
ಜಿಪಂ ಸದಸ್ಯರಾದ ಬಿ.ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಶಾಹುಲ್ ಹಮೀದ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಪುರಸಬಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಕೆಡಿಪಿ ಸದಸ್ಯ ಉಮೇಶ ಬೋಳಂತೂರು, ಭೂ ಅಬಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ಉಪಾಧ್ಯಕ್ಷ ಕೆ. ಸಂಜೀವ ಪೂಜಾರಿ, ನಾಮ ನಿರ್ದೇಶಿತ ಸದಸ್ಯ ಪ್ರಕಾಶ್ ಬಿ. ಶೆಟ್ಟಿ ತುಂಬೆ, ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ನಿರೀಕ್ಷಕರಾದ ನಾರಾಯಣ ಪೂಜಾರಿ, ದಿವಾಕರ ಮುಗುಳ್ಯ, ಆಸೀಫ್ ಇಕ್ಬಾಲ್ ಮತ್ತಿತರರು ಇದ್ದರು.