×
Ad

ಯುವತಿಯ ಮಾನಭಂಗ ಯತ್ನ ಪ್ರಕರಣ: ಆರೋಪಿ ಬಾಲ ನ್ಯಾಯಾಲಯಕ್ಕೆ

Update: 2016-06-14 20:02 IST

ಪುತ್ತೂರು, ಜೂ.14: ಪುತ್ತೂರು ನಗರದ ಹೊರವಲಯದ ಸಾಮೆತ್ತಡ್ಕ ಎಂಬಲ್ಲಿನ ನಿವಾಸಿಯಾದ ಯುವತಿಯೊಬ್ಬಳ ಮಾನಭಂಗಕ್ಕೆ ಯತ್ನಿಸಿದ ಪ್ರಕರಣದ ಆರೋಪಿಯನ್ನು ಬಂಧಿಸಿರುವ ಪುತ್ತೂರು ನಗರ ಪೊಲೀಸರು ಆತನನ್ನು ಬಾಲ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪುತ್ತೂರು ನಗರದ ಹೊರವಲಯದ ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ನಿವಾಸಿ ಅಪ್ರಾಪ್ತ ಬಾಲಕ ಬಂಧಿತ ಆರೋಪಿ. ಆರೋಪಿಯು ಕಳೆದ ಶುಕ್ರವಾರ ರಾತ್ರಿಯ ವೇಳೆ ಯುವತಿಯ ಮನೆಯ ಬಳಿಗೆ ತೆರಳಿ ಆಕೆಯ ಮಾನಭಂಗಕ್ಕೆ ಯತ್ನಿಸಿರುವುದಾಗಿ ಆರೋಪಿಸಲಾಗಿತ್ತು.

ಪೊಲೀಸರು ಆತನನ್ನು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಎಂದು ಪರಿಗಣಿಸಿ ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಿರುವುದಾಗಿ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News