ಚಿನ್ನಾಭರಣದೊಂದಿಗೆ ಕೆಲಸದಾಳು ನಾಪತ್ತೆ
Update: 2016-06-14 21:28 IST
ಮಂಗಳೂರು, ಜೂ. 14: ಮನೆಗೆಲಸದಾಳು ಲಕ್ಷಾಂತರ ರೂ. ವೌಲ್ಯದ ಚಿನ್ನಾಭರಣದೊಂದಿಗೆನಾಪತೆತಿಯಾಗಿರುವ ಕುರಿತು ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಿಜೈ ಕಾಪಿಕಾಡ್‌ನಲ್ಲಿರುವ ಅಶಕ್ತ ವೃದ್ಧ ತಂದೆ ತಾಯಿಯರನ್ನು ನೋಡಿಕೊಳ್ಳಲೆಂದು ನೇಮಿಸಿದ್ದ ಎಸ್.ಪಿ. ಮಂಜುನಾಥ್ ಜೂನ್ 13ರಂದು ಬೆಳಗ್ಗೆ ಅಂಗಡಿಗೆ ತೆರಳಿದವನು ವಾಪಸ್ಸಾಗದೆ ನಾಪತ್ತೆಯಾಗಿದ್ದಾರೆ.
ಮನೆಯಲ್ಲಿದ್ದ ತಾಯಿಯ 260 ಗ್ರಾಂ. ತೂಕದ ಚಿನ್ನಾಭರಣಗಳ ಬ್ಯಾಗನ್ನು ಕಳವುಗೈದಿದ್ದು, ಚಿನ್ನಾಭರಣದ ಮೊತ್ತ 6,78,000ರೂ. ಎಂದು ಅಶ್ವಿನಿಕುಮಾರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.