×
Ad

ಬ್ಲಡ್ ಡೋನರ್ಸ್‌ ಮಂಗಳೂರು ತಂಡದ ವತಿಯಿಂದ ‘ವಿಶ್ವ ರಕ್ತದಾನಿಗಳ ದಿನಾಚರಣೆ

Update: 2016-06-15 10:20 IST

ಮಂಗಳೂರು, ಜೂ.15: ಬ್ಲಡ್ ಡೋನರ್ಸ್ ಮಂಗಳೂರು ತಂಡದ ವತಿಯಿಂದ ಮಂಗಳೂರಿನ ಸರಕಾರಿ ಲೇಡಿಗೊಶನ್ ಆಸ್ಪತ್ರೆ ಯಲ್ಲಿ ‘ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಹಾಗೂ ರಕ್ತದಾನದ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಗಾರ ನಡೆಯಿತು. ಕಾರ್ಯಕ್ರಮದಲ್ಲಿ ಬ್ಲಡ್ ಡೋನರ್ಸ್‌ನ ಅಧ್ಯಕ್ಷ ಸಿದ್ದೀಕ್ ಮಂಜೇಶ್ವರರನ್ನು ಸನ್ಮಾನಿಸಲಾಯಿತು.

ಗಲ್ಫ್ಗೈಸ್ ಉಳ್ಳಾಲ ಹೆಲ್ಪ್‌ಲೈನ್ ಮತ್ತು ಬ್ಯಾರಿಗೈಸ್ ಕೆಎಸ್‌ಎ ಕಾರ್ಯಕ್ರಮವನ್ನು ಪ್ರಾಯೋಜಿಸಿದ ಕಾರ್ಯಕ್ರಮದಲ್ಲಿ ಬ್ಲಡ್ ಡೋನರ್ಸ್‌ ಮಂಗಳೂರು ತಂಡದ ಅಧ್ಯಕ್ಷ ಸಿದ್ದಿಕ್ ಮಂಜೇಶ್ವರ ಹಾಗೂ ಮುಸ್ತಫಾ ಕೆ.ಸಿ.ರೋಡ್, ತ್ವಾಹ ಉಳ್ಳಾಲ್, ಶಾಹಿದ್ ಸುರತ್ಕಲ್, ನಿಝಾಮ್ ಮಂಕಿಸ್ಟಾಂಡ್, ಸಹನಾ ಮತ್ತು ಸದಸ್ಯರು, ಲೇಡಿಗೊಶನ್ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಕಳೆದ ಎರಡು ವರ್ಷಗಳಿಂದ ಸಾಮಾಜಿಕ ತಾಣಗಳಲ್ಲಿ ಬರುವ ರಕ್ತದ ಬೇಡಿಕೆಗಳಿಗೆ ಸ್ಪಂದಿಸಿ ರಕ್ತಪೂರೈಕೆ ಮಾಡುತ್ತಿರುವ ಬ್ಲಡ್ ಡೋನರ್ಸ್ ತಂಡವು ಯಶಸ್ವಿಯಾಗಿ ಹತ್ತಕ್ಕೂ ಹೆಚ್ಚು ರಕ್ತದಾನ ಶಿಬಿರಗಳನ್ನು ನಡೆಸಿ ಸಾವಿರಾರು ಯುನಿಟ್ ರಕ್ತ ಸಂಗ್ರಹಿಸಿ ಊರಿನ ಬಡ ರೋಗಿಗಳಿಗೆ ನೀಡುತ್ತಾ ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News