×
Ad

ಪೂಂಜಾಲಕಟ್ಟೆ: ನುಸ್ರತುಲ್ ಇಸ್ಲಾಂ ಯಂಗ್‌ಮೆನ್ಸ್ ಅಸೋಸಿಯೇಷನ್‌ನಿಂದ ರಮಝಾನ್ ಕಿಟ್ ವಿತರಣೆ

Update: 2016-06-15 10:43 IST

ಪೂಂಜಾಲಕಟ್ಟೆ, ಜೂ.15: ನುಸ್ರತುಲ್ ಇಸ್ಲಾಂ ಯಂಗ್‌ಮೆನ್ಸ್ ಅಸೋಸಿಯೇಷನ್ ಪೂಂಜಾಲಕಟ್ಟೆ ಇದರ ವತಿಯಿಂದ ರಮಝಾನ್ ಕಿಟ್ ವಿತರಣಾ ಕಾರ್ಯಕ್ರಮ ಪೂಂಜಾಲಕಟ್ಟೆಯ ಮದರಸ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬದ್ರಿಯಾ ಜುಮಾ ಮಸೀದಿ ಪೂಂಜಾಲಕಟ್ಟೆಯ ಖತೀಬರಾದ ಅಶ್ರಫ್ ಪೈಝಿ ವಹಿಸಿ ಮಾತನಾಡಿದರು.

ಸುಮಾರು 66,000 ರೂ. ಮೌಲ್ಯದ 22 ಕಿಟ್‌ಗಳನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಬದ್ರಿಯಾ ಜುಮಾ ಮಸೀದಿ ಪೂಂಜಾಲಕಟ್ಟೆ ಇದರ ಅಧ್ಯಕ್ಷ ಹಾಜಿ ಯೂಸುಫ್ ಮೂರ್ಜೆ, ಉಪಾಧ್ಯಕ್ಷ ಅಬ್ದುರ್ರಝಾಕ್, ಮಾಜಿ ಅಧ್ಯಕ್ಷ ಉಮರಬ್ಬ, ನುಸ್ರತುಲ್ ಇಸ್ಲಾಂ ಯಂಗ್‌ಮೆನ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಸಾಜಿ ಹುಸೈನ್, ಪ್ರಧಾನ ಕಾರ್ಯದರ್ಶಿ ಅಶ್ಫಾಕ್ ಎಂ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News