ತುಂಬೆ: ಕ್ರೆಸೆಂಟ್ ಯಂಗ್ ಮೆನ್ಸ್ ನೂತನ ಪದಾಧಿಕಾರಿಗಳ ಆಯ್ಕೆ
Update: 2016-06-15 13:36 IST
ಬಂಟ್ವಾಳ, ಜೂ. 15: ಮುಹಿಯುದ್ದೀನ್ ಜುಮಾ ಮಸೀದಿ ತುಂಬೆ ಇದರ ಅಧೀನದಲ್ಲಿ 37 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸಂಘಟನೆ ಕ್ರೆಸೆಂಟ್ ಯಂಗ್ ಮೆನ್ಸ್ ಅಸೋಷಿಯೇಶನ್ ವಾರ್ಷಿಕ ಮಹಾಸಭೆ ಇತ್ತೀಚೆಗೆ ಸಂಘದ ಕಚೇರಿಯಲ್ಲಿ ನಡೆಯಿತು.
ಸಭೆಯಲ್ಲಿ ಸಂಘದ 2016-17ನೆ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸಿರಾಜುದ್ದೀನ್, ಉಪಾಧ್ಯಕ್ಷರಾಗಿ ಝಹೂರ್ ಅಹ್ಮದ್, ಪ್ರಧಾನ ಕಾರ್ಯದರ್ಶಿಯಾಗಿ ಶೌಹಾನ್, ಜೊತೆ ಕಾರ್ಯದರ್ಶಿಯಾಗಿ ತ್ವಾಹಿರ್, ಕಜಾಂಚಿಯಾಗಿ ಆಶಿಫ್ ಕೆಳಗಿನ ತುಂಬೆ, ಸಂಘಟನಾ ಕಾರ್ಯದರ್ಶಿಯಾಗಿ ಆರಿಫ್, ಲೆಕ್ಕಪರಿಶೋಧಕರಾಗಿ ಇಮ್ತಿಯಾಝ್ ತುಂಬೆ ಆಯ್ಕೆಯಾದರು.
ಸದಸ್ಯರಾಗಿ ಬದ್ರುದ್ದೀನ್, ಸುಹಾಝ್, ಸಿದ್ದೀಕ್, ಶಮೀರ್, ಶಂಸುದ್ದೀನ್ ನೇಮಕಗೊಂಡರು. ಚುನಾವಣಾ ಪ್ರಕ್ರಿಯೆಯನ್ನು ತುಂಬೆ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಟಿ.ಎಂ.ಮೂಸಬ್ಬ ನಡೆಸಿಕೊಟ್ಟರು.