×
Ad

ರಮಝಾನ್‌ನಲ್ಲಿ ಹೊಟ್ಟೆ, ಬೊಜ್ಜು ಕರಗಿಸಲು ಇಲ್ಲಿದೆ ಮಾರ್ಗ

Update: 2016-06-15 14:33 IST

ರಮಝಾನ್ ಉಪವಾಸ ಮಾಡುವವರು ತಡರಾತ್ರಿಯ ಸ್ನಾಕ್ ತಿನ್ನುವ ಅಭ್ಯಾಸದಿಂದ ತೂಕ ಬೆಳೆಸಿಕೊಳ್ಳುವ ಭಯ ಹೊಂದಿರಬಹುದು. ಹೀಗೆ ಅತಿಯಾಗಿ ತಿನ್ನುವುದರಿಂದ ಮೊದಲ ಬಲಿಯಾಗುವುದು ಹೊಟ್ಟೆ. ಹೊಟ್ಟೆಯ ಕೊಬ್ಬನ್ನು ಇಳಿಸಿಕೊಳ್ಳಲು ಕೆಳಗಿನ ವಿಧಾನಗಳನ್ನು ಅನುಸರಿಸಬಹುದು.

ಹೊಟ್ಟೆಯ ಕೊಬ್ಬು ಕಳೆಯಲು ಯಾವುದೇ ಫಾರ್ಮುಲಾ ಇರುವುದಿಲ್ಲ. ಆದರೆ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದು ಮತ್ತು ಸೂಪರ್ ಆಹಾರಗಳನ್ನು ಹೊಂದಿರುವ ಪೌಷ್ಟಿಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಹೊಟ್ಟೆಯ ಕೊಬ್ಬನ್ನು ಇಳಿಸಲು ಕಾರಣವಾಗಲಿದೆ. ಈ ನಿಟ್ಟಿನಲ್ಲಿ ಕೆಲವು ಸಲಹೆಗಳು ಇಲ್ಲಿವೆ:

ಸಲಹೆ 1: ಸರಿಯಾದ ಆಹಾರ ಸೇವಿಸಿ ಒತ್ತಡ ಕಡಿಮೆ ಮಾಡಿಕೊಳ್ಳಿ

ಆಹಾರ ಸೇವನೆಯಿಂದ ತೂಕ ಕಡಿಮೆಯಾಗಲು ಸಾಧ್ಯವಿಲ್ಲ. ಆದರೆ ಒತ್ತಡ ನಿವಾರಣೆ ಮತ್ತು ಕಡಿಮೆ ಕಾರ್ಟಿಸಾಲ್ ಮಟ್ಟಗಳು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲಿದೆ. ಕಾರ್ಟಿಸಾಲ್ ಒಂದು ಸ್ಟೆರಾಯ್ಡೆ ಹಾರ್ಮೋನ್ ಆಗಿದ್ದು, ಒತ್ತಡದ ಸಮಯದಲ್ಲಿ ಬಿಡುಗಡೆಯಾಗುತ್ತದೆ ಮತ್ತು ಕಡಿಮೆ ರಕ್ತದ ಗ್ಲುಕೋಸ್ ಅಂಶ ಹೊಂದಿದೆ. ಕೆಫೈನ್, ಸಕ್ಕರೆ ಮತ್ತು ಸಂಸ್ಕರಿತ ಆಹಾರ ಕೊಬ್ಬನ್ನು ಏರಿಸುತ್ತದೆ. ತರಕಾರಿಗಳು, ಹಣ್ಣುಗಳು, ಬೀನ್ಸ್, ಅವಕಾಡೋ ಕಡಲೆಗಳು, ಬೀಜಗಳು ಬೊಜ್ಜನ್ನು ನಿವಾರಿಸುತ್ತವೆ.

ಸಲಹೆ 2: ಹೈ ಫೈಬರ್ ಸಸ್ಯಗಳನ್ನೇ ಸೇವಿಸಿ

ಹೈಫೈಬರ್ ಸಸ್ಯ ಆಹಾರಗಳು ಕೊಬ್ಬನ್ನು ನಿವಾರಿಸಲು ನೆರವಾಗುತ್ತವೆ. ಬ್ರಕೊಲಿ, ಬ್ರುಸಲ್ಸ್ ಮೊಳಕೆ, ಬಟಾಣಿ, ಓಟ್ ಮೀಲ್, ಆಪಲ್, ಸ್ಪ್ಲಿಟ್ ಬಟಾಣಿ, ಬ್ಲಾಕ್ ಬೀನ್ಸ್, ಲಿಮಾ ಬೀನ್ಸ್, ಆರ್ಟಿಚೋಕ್, ಅವಕಾಡೋ ಮತ್ತು ರಾಸ್ಪಬೆರಿಗಳು ಫೈಬರ್ ಹೆಚ್ಚಿರುವ ಆಹಾರ. ಇವುಗಳ ಸೇವನೆಯಿಂದ ಹೃದಯಾಘಾತ ಮತ್ತು ಅಧಿಕ ಒತ್ತಡದ ಸಮಸ್ಯೆಯಿಂದಲೂ ನಿವಾರಣೆ ಪಡೆದುಕೊಳ್ಳಬಹುದು.

ಸಲಹೆ 3: ಬೀಜಗಳ ಮೂಲಕ ಹಾರ್ಮೋನುಗಳ ನಿಯಂತ್ರಣ

ಹೊಟ್ಟೆಯ ಕೊಬ್ಬನ್ನು ನಿವಾರಿಸಿಕೊಳ್ಳುವ ಒಂದು ವಿಧವೆಂದರೆ ಹಾರ್ಮೋನುಗಳನ್ನು ನಿಯಂತ್ರಿಸುವುದು. ಹಾರ್ಮೋನುಗಳನ್ನು ಸಹಜವಾಗಿ ಸಮತೋಲನಕ್ಕೆ ತರುವ ವಿಧಾನವೆಂದರೆ ಫ್ಲೆಕ್ಸ್ ಸೀಡ್ ಮತ್ತು ಚಿಯಾ ಸೀಡ್ ಗಳು. ಇವುಗಳು ಕೊಬ್ಬಿನ ಸಂಗ್ರಹದ ಮೇಲೆ ಪರಿಣಾಮ ಬೀರುವ ಹಾರ್ಮೋನುಗಳನ್ನು ನಿಯಂತ್ರಿಸುತ್ತವೆ.

ಸಲಹೆ 4: ಸಾಸೀ ಸೇವಿಸಿ

ನಾಲ್ಕೈದು ಗ್ಲಾಸ್ ಸಾಸೀ ನೀರು ಕುಡಿಯಿರಿ. ಇದರಲ್ಲಿ ಇಲೆಕ್ಟ್ರೊಲೈಟ್, ಆಂಟಿ ಆಕ್ಸಿಡಂಟ್, ಪೌಷ್ಟಿಕಾಂಶ ಮತ್ತು ಫೀಟೋ ಕೆಮಿಕಲ್ಸ್ ಇರುತ್ತದೆ. ಇದನ್ನು ತಯಾರಿಸುವುದು ಸುಲಭ. 2 ಲೀಟರ್ ನೀರು, 1 ಚಮಚ ಶುಂಠಿ, 1 ತುಂಡು ಸೌತೆ, 1 ತುಂಡು ಲಿಂಬೆ, 12 ಪುದಿನ ಎಲೆಗಳು ಇದ್ದರೆ ಸಾಕು.

ಸಲಹೆ 5: ಪೌಷ್ಟಿಕಾಂಶಗಳ ಜೋಡಿ

ಶಕ್ತಿಯನ್ನು ಹೆಚ್ಚಿಸಲು ಪೌಷ್ಟಿಕಾಂಶ ಹೀರಿಕೊಳ್ಳುವುದು ಮುಖ್ಯ. ಜಿಮ್ ಹೋಗುವ ಜೊತೆಗೆ ಕೆಲ ಆಹಾರಗಳನ್ನು ಸೇವಿಸಿ. ವಿಟಮಿನ್ ಸಿ ಇರುವ ಆಹಾರ ಉತ್ತಮ. ಇಡೀಧಾನ್ಯ ಮತ್ತು ಬೀನ್ಸ್ ನಿಮ್ಮ ಪ್ರೊಟೀನ್ ಸರಿದೂಗಿಸುತ್ತದೆ. ಬೆಳ್ಳುಳ್ಳಿ ಮತ್ತು ಈರುಳ್ಳಿ ಪೌಷ್ಟಿಕ ಹೀರುವಿಕೆಯನ್ನು ಹೆಚ್ಚಿಸುತ್ತದೆ.

ಸಲಹೆ 6: ಹೊಟ್ಟೆಯ ಕೊಬ್ಬು ಎಂದರೆ ಜನರು ತಮ್ಮ ಪೌಷ್ಠಿಕ ಯೋಜನೆಗಳನ್ನು ಬದಲಿಸಬೇಕು

ಅವರು ಎರಡು ಅಥವಾ ಮೂರು ದೊಡ್ಡ ಆಹಾರವನ್ನು ದಿನವೊಂದಕ್ಕೆ ಸೇವಿಸುವಂತಿಲ್ಲ. ಮೂರು ಭಾಗದಲ್ಲಿ ಆಹಾರ ಸೇವಿಸಬೇಕು. ಪ್ರತೀ ಮೂರುಗಂಟೆಗೆ ಮೂರು ಸ್ನಾಕ್ ಗಳು.

ಲಹೆ 7: ತೆಂಗಿನ ಎಣ್ಣೆ ಬಳಸುವುದು ತೂಕ ಇಳಿಸಲು ಉತ್ತಮ

ಎಣ್ಣೆ ಜೊತೆ ಬೇಯಿಸಬೇಡಿ. ಬೇಯಿಸಬೇಕೆಂದರೆ ತೆಂಗಿನೆಣ್ಣೆ ಬಳಸಿ. ಇದರಲ್ಲಿ ಉತ್ತಮ ಸ್ಯಾಚುರೇಟೆಡ್ ಕೊಬ್ಬು ಇದ್ದು, ಆರೋಗ್ಯಕ್ಕೆ ಒಳ್ಳೆಯದು.

ಸಲಹೆ 8: ನಿಧಾನವಾಗಿ ತಿನ್ನಿ

ಕೊನೆಯದಾಗಿ ನಿಧಾನವಾಗಿ ತಿನ್ನಬೇಕು. ನಮ್ಮ ಹೊಟ್ಟೆ ತೃಪ್ತಿಯಾಗಿರುವುದನ್ನು ಹೇಳಲು ಮೆದುಳಿಗೆ 20 ನಿಮಿಷಗಳು ಬೇಕು. ಹೀಗಾಗಿ ಆರೋಗ್ಯಕರ ಆಹಾರವನ್ನು ನಿಧಾನವಾಗಿ ಆನಂದಿಸಿ.

ಕೃಪೆ: http://english.alarabiya.net

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News