×
Ad

ನಾನಾವತಿ ಆಯೋಗ 1984ರ ದಂಗೆಯಲ್ಲಿ ತನಗೆ ಕ್ಲೀನ್ ಚಿಟ್ ನೀಡಿದೆ: ಕಮಲ್‌ನಾಥ್

Update: 2016-06-15 16:14 IST

ಜಲಂಧರ್, ಜೂನ್ 15: ಪಂಜಾಬ್‌ಗೆ ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಕಗೊಂಡ ಕಮಲ್‌ನಾಥ್, ಪಂಜಾಬ್‌ನಲ್ಲಿ ಆಮ್‌ಆದ್ಮಿ ಪಕ್ಷದ ಆಕರ್ಷಣೆ ಮಸುಕಾಗುತ್ತಿದೆ.ಇನ್ನೊಂದೆಡೆ ಅಕಾಲಿದಳ ಸರಕಾರದ ವಿರೋಧಿ ಅಲೆ ಕಂಡು ಬರುತ್ತಿದೆ ಎಂದು ಹೇಳಿದ್ದಾರೆ. ತನ್ನ ವಿರುದ್ಧ ಅಕಾಲಿದಳ ಹಾಗೂ ಆಮ್ ಆದ್ಮಿ ಪಾರ್ಟಿ 1984ರ ಸಿಖ್ ದಂಗೆಯ ಆರೋಪವನ್ನು ಹೊರಿಸಲು ಹೆಣಗಾಡುತ್ತಿದೆ ಎಂದ ಅವರು ಆದರೆ ಆ ದಂಗೆಯಲ್ಲಿ ತಾನಿರಲಿಲ್ಲ. ಮತ್ತು ತನ್ನ ವಿರುದ್ಧ ಯಾವುದೇ ಅಂತಹ ಪ್ರಕರಣಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪಂಜಾಬ್‌ನಲ್ಲಿ ಅಕಾಲಿದಳ ಹಾಗೂ ಆಮ್ ಆದ್ಮಿ ಪಕ್ಷಗಳಲ್ಲಿ ಕಾಂಗ್ರೆಸ್‌ಗೆ ಯಾವುದರಿಂದ ಸವಾಲು ಎದುರಾಗಲಿದೆ ಎಂದು ಭಾವಿಸುತ್ತೀರಿ ಎಂದು ಪ್ರಶ್ನಿಸಿದಾಗ ಅವರೆಡನ್ನೂ ನಿಭಾಯಿಸಲೇ ಬೇಕಿದೆ ಎಂದು ಕಮಲ್‌ನಾಥ್ ಉತ್ತರಿಸಿದ್ದಾರೆ. ತನಗೆ ಮಾಹಿತಿ ಸಿಕ್ಕಿರುವ ಪ್ರಕಾರ ಕಳೆದ ಒಂಬತ್ತುವರ್ಷಗಳ ಅಕಾಲಿದಳ ಸರಕಾರದ ಭ್ರಷ್ಟಾಚಾರದಿಂದಾಗಿ ಜನರು ಭ್ರಮನಿರಸನ ಗೊಂಡಿದ್ದಾರೆ. ಕಾಂಗ್ರೆಸ್‌ಗೆ ಇದು ಅನುಕೂಲವಾಗಲಿದೆ ಎಂದಿದ್ದಾರೆ.

1984ರ ದಂಗೆಯಲ್ಲಿ ಪಾಲ್ಗೊಂಡ ಯಾವುದೇ ಆರೋಪ ತನ್ನಮೇಲಿಲ್ಲ. ತನ್ನ ವಿರುದ್ಧ ಬಿಜೆಪಿ ಹೊರಿಸಿದ್ದ ಆರೋಪವನ್ನು ನಾನಾವತಿ ಆಯೋಗ ಅದಾಗಲೇ ತಿರಸ್ಕರಿಸಿದೆ. ಇದರ ಕುರಿತು ಸಂಪೂರ್ಣವರದಿಯನ್ನು ಯಾರೂ ಇಂಟರ್‌ನೆಟ್‌ನಲ್ಲಿ ನೋಡಬಹುದಾಗಿದೆ ಎಂದು ತನ್ನನ್ನು ಕಮಲ್‌ನಾಥ್ ಸಮರ್ಥಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News