×
Ad

ದಾರುನ್ನೂರ್ ಎಜುಕೇಶನ್ ಸೆಂಟರ್ ವತಿಯಿಂದ ರಮಝಾನ್ ಕಿಟ್ ವಿತರಣೆ

Update: 2016-06-15 16:49 IST

ಮಂಗಳೂರು, ಜೂ. 15: ದಾರುನ್ನೂರ್ ಎಜುಕೇಶನ್ ಸೆಂಟರ್ ಮೂಡುಬಿದಿರೆಯಲ್ಲಿ ಇಫ್ತಾರ್ ಕೂಟ ಹಾಗೂ ಅಲ್ ಫಲಾಹ್ ಗ್ರೂಪ್ ಆಫ್ ಕಂಪನೀಸ್‌ನ ಚೇರ್‌ಮ್ಯಾನ್ ಹಾಜಿ ಯೂಸುಫ್ ಸುಬ್ಬಯ್ಯಕಟ್ಟೆ ಅವರ ವತಿಯಿಂದ ವಿದ್ಯಾರ್ಥಿಗಳಿಗೆ ರಮಝಾನ್ ಕಿಟ್ ವಿತರಣೆ ನಡೆಯಿತು.

ಇದೇ ಸಂದರ್ಭದಲ್ಲಿ ದುಬೈ ಸರಕಾರದ ಆಹ್ವಾನದ ಮೇರೆಗೆ ದುಬೈಯಲ್ಲಿ ನಡೆಯಲಿರುವ ಹೋಲಿ ಕುರ್‌ಆನ್ ಅವಾರ್ಡ್ ನೀಡುವ ಸಂದರ್ಭದಲ್ಲಿ ‘ಮನುಷ್ಯನ ಮೇಲೆ ಕುರ್‌ಆನ್‌ನಿಂದಾಗುವ ಪ್ರಭಾವ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಲಿರುವ ದ.ಕ. ಜಿಲ್ಲಾ ಖಾಝಿ ಹಾಗೂ ಸಮಸ್ತ ಮುಶಾವರದ ಸದಸ್ಯ ತ್ವಾಕ ಅಹ್ಮದ್ ಮುಸ್ಲಿಯಾರ್ ಶಾಲು ಹೊದಿಸಿ ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News