ಗಣೇಶಪುರ: ಅಜೇಯ್ ಫ್ರೆಂಡ್ಸ್ ಸರ್ಕಲ್‌ನಿಂದ ಪುಸ್ತಕ ವಿತರಣೆ
ಮಂಗಳೂರು, ಜೂ.15: ಅಜೇಯ್ ಫ್ರೆಂಡ್ಸ್ ಸರ್ಕಲ್ ಗಣೇಶಪುರ- ಕಾಟಿಪಳ್ಳ ಇದರ ಆಶ್ರಯದಲ್ಲಿ ವಿಶೇಷ ಆರ್ಥಿಕ ವಲಯ ಮಂಗಳೂರು ಇದರ ಸಹಕಾರದೊಂದಿಗೆ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ಸುರತ್ಕಲ್ ಮಂಗಳಪೇಟೆಯ ಶಾರದಾ ಭಜನಾ ಮಂಡಳಿಯಲ್ಲಿ ಜರಗಿತು.
1ರಿಂದ 10ನೆ ತರಗತಿ ವರೆಗಿನ ಸುಮಾರು 90 ಮಕ್ಕಳಿಗೆ ಪುಸ್ತಕವನ್ನು ವಿತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಕೀಲ ಸದಾಶಿವ ಐತಾಳ್ ಕೃಷ್ಣಾಪುರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ದೇವರಾಜ್ ಶೆಟ್ಟಿ, ಸಿವಿಲ್ ಕಂಟ್ರಾಕ್ಟರ್ ಪಿ.ಜಿ. ಶಂಕರ್ ದೇವಾಡಿಗ ಬೊಳ್ಳಾಜೆ, ಕಿರಣ್ ಕುಮಾರ್ ರೈ, ಉದ್ಯಮಿ ಸತೀಶ್ ಆಚಾರ್, ಮಂಗಳಪೇಟೆ ಶಾರದಾ ಭಜನಾ ಮಂಡಳಿಯ ಅಧ್ಯಕ್ಷ ಕೃಷ್ಣಕುಮಾರ್, ಪ್ರಧಾನ ಕಾರ್ಯದರ್ಶಿ ನಾಗರಾಜ ಶೆಟ್ಟಿಗಾರ್, ಅಜೇಯ್ ಫ್ರೆಂಡ್ಸ್ ಸರ್ಕಲ್‌ನ ಗೌರವ ಸಲಹೆಗಾರ ವಾದಿರಾಜ ಭಟ್, ಅಧ್ಯಕ್ಷ ಶ್ರೀ ನವೀನ್ ಶೆಟ್ಟಿ, ಉಪಸ್ಥಿತರಿದ್ದರು.
ಲೋಕನಾಥ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ನಾಗೇಶ್ ದೇವಾಡಿಗ ವಂದಿಸಿದರು.