ಮಡಿಕೇರಿ ಗಲಭೆ : ಮ್ಯಾಜಿಸ್ಟೇರಿಯಲ್ ತನಿಖಾ ವರದಿ ಶಿಫಾರಸ್ಸು
ಬೆಂಗಳೂರು, ಜೂ.15: ಕಳೆದ ವರ್ಷ ನ.10ರಂದು ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ‘ಮೈಸೂರು ಹುಲಿ’ ಟಿಪ್ಪುಸುಲ್ತಾನ್ ಜಯಂತಿ ಸಂದರ್ಭದಲ್ಲಿ ಉಂಟಾದ ಗಲಭೆ ಕುರಿತು ಮ್ಯಾಜಿಸ್ಟೇರಿಯಲ್ ತನಿಖಾ ವರದಿಯ ಶಿಫಾರಸ್ಸುಗಳನ್ನು ಜಾರಿಗೆ ತರಲು ರಾಜ್ಯಮಂತ್ರಿಪರಿಷತ್ ಸಭೆಯಲ್ಲಿ ನಿರ್ಧರಿಸಲಾಗಿದೆ.
ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯಮಂತ್ರಿ ಪರಿಷತ್ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಉನ್ನತ ಶಿಕ್ಷಣ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಈ ವಿಷಯವನ್ನು ಬಹಿರಂಗಪಡಿಸಿದರು.
ಬುವಾರಮುಖ್ಯಮಂತ್ರಿಸಿದ್ದರಾಮಯ್ಯಅ್ಯಕ್ಷತೆಯಲ್ಲಿ ನಡೆದ ರಾಜ್ಯಮಂತ್ರಿ ಪರಿಷತ್ ಸೆಯನಂತರಪತ್ರಿಕಾಗೋಷ್ಠಿಯನ್ನುದ್ದೇಶಿಸಿಮಾತನಾಡಿದಉನ್ನತಶಿಕ್ಷಣ,ಕಾನೂನುಮಅಂದಿನ ಜಿಲ್ಲಾಧಿಕಾರಿ ಮೀರ್‌ಅನೀಸ್‌ಅಹ್ಮದ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಈ ಪ್ರಮುಖ ಸರಕಾರಿ ಸಮಾರಂಭದ ಸಂದರ್ಭದಲ್ಲಿ ರಜೆಯ ಮೇಲೆ ತೆರಳಿ ಕರ್ತವ್ಯದಲ್ಲಿ ಲೋಪ ಎಸಗಿರುವುದರಿಂದ ಇನ್ನು ಮುಂದೆ ಈ ಇಬ್ಬರೂ ಅಧಿಕಾರಿಗಳಿಗೆ ಕಾರ್ಯಕಾರಿ ಹುದ್ದೆಗಳನ್ನು ನೀಡಬಾರದು ಎಂದು ತೀರ್ಮಾನ ಕೈಗೊಂಡ ಸಭೆಯು ದಕ್ಷಿಣ ವಲಯದ ಐಜಿಗೂ ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ನಿರ್ಧರಿಸಿದೆ ಎಂದು ಅವರು ಹೇಳಿದರು.
ಅಲ್ಲದೆ, ಈ ಇಬ್ಬರೂ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಂತ್ರಿಪರಿಷತ್ ಸಭೆ ತೀರ್ಮಾನಿಸಿತು. ಇನ್ನು ಮುಂದೆ ಸರಕಾರದ ಪ್ರಮುಖ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲೆಯಲ್ಲಿನ ಇತರೆ ಇಲಾಖೆಗಳ ಎಲ್ಲ ಮುಖ್ಯಸ್ಥರು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ಇರಬೇಕು ಎಂದು ಸುತ್ತೋಲೆ ಹೊರಡಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಜಯಚಂದ್ರ ತಿಳಿಸಿದರು.
ಗಲಭೆ ಸಂದರ್ಭದಲ್ಲಿ ಸಾವಿಗೀಡಾದ ಕುಟ್ಟಪ್ಪಅವರ ಮರಣೋತ್ತರ ವರದಿಯಲ್ಲಿ ಮೇಲಿನಿಂದ ಬಿದ್ದ ಪರಿಣಾಮ ಉಂಟಾದ ಆಘಾತದಿಂದ ಕುಟ್ಟಪ್ಪ ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿದೆ ಎಂದು ಜಯಚಂದ್ರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಅಪರಾಧ ತನಿಖಾ ಸಂಸ್ಥೆ(ಸಿಐಡಿ)ಯ ಕೇಂದ್ರ ಕಚೇರಿ ಕಾರ್ಲ್‌ಟನ್ ಹೌಸ್‌ನಲ್ಲಿ ಕಾನ್ಸ್‌ಟಿಟ್ಯೂಷನಲ್ ಕ್ಲಬ್ (ಸಾಂವಿ ಧಾನಿಕ ಕ್ಲಬ್) ಮಾದರಿಯಲ್ಲಿ ಲೆಜಿಸ್ಲೇಟಿವ್ ಕ್ಲಬ್(ಶಾಸಕರ ಕ್ಲಬ್) ಪ್ರಾರಂಭಿಸಬೇಕೆಂದು ಸ್ಪೀಕರ್ ಕಾಗೋಡುತಿಮ್ಮಪ್ಪಹಾಗೂ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಮನವಿಯನ್ನು ಪರಿಶೀಲಿಸಿದ ಮಂತ್ರಿ ಪರಿಷತ್ ಸಭೆಯು ಈ ಮನವಿಯನ್ನು ಪರಾಮರ್ಶಿಸಿ ಸರಕಾರಕ್ಕೆ ವರದಿ ಸಲ್ಲಿಸಲು ಹಿರಿಯ ಸಚಿವ ಆರ್.ವಿ.ದೇಶಪಾಂಡೆ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ನಿರ್ಣಯಿಸಿದೆ ಎಂದು ಅವರು ಹೇಳಿದರು.
ಸಾರವರ್ಧಕ ಅಕ್ಕಿ ಬಳಕೆಗೆ ಒಪ್ಪಿಗೆ: ರಾಜ್ಯದ 2600 ಶಾಲೆಗಳಲ್ಲಿ ಪ್ರಾಯೋಗಿಕ ವಾಗಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಗುಣಮಟ್ಟದ ಹಾಗೂ ಪೌಷ್ಠಿಕಾಂಶವುಳ್ಳ ಸಾರವರ್ಧಕ ಅಕ್ಕಿಯನ್ನು ಬಳಕೆಗೆ ಒಪ್ಪಿಗೆ ಸೂಚಿಸಿದ ಮಂತ್ರಿ ಪರಿಷತ್ ಸಭೆ ಅಕ್ಷಯ ಪಾತ್ರ ಪ್ರತಿಷ್ಠಾನದ ಈ ಕಾರ್ಯಕ್ರಮವನ್ನು ಮುಂದುವರೆಸಲು ಅನುಮೋದನೆ ನೀಡಲಾಗಿದೆ ಎಂದು ಜಯಚಂದ್ರ ತಿಳಿಸಿದರು.
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಎಲ್ಲ ಪೌಷ್ಠಿಕಾಂಶಗಳಿರುವ ಅಕ್ಕಿ-ಬೇಳೆ ಇತರೆ ಧಾನ್ಯಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದು ನೀಡಿರುವ ಸೂಚನೆಯನ್ನು ಸಮ್ಮತಿಸಿದ ಮಂತ್ರಿ ಪರಿಷತ್, ಈ ಎಲ್ಲ ಸೂಚನೆಗಳನ್ನು ಪಾಲಿಸಲು ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದರು.
ಸುಂಕೇರಿ ಕಡವಾಡ ರಸ್ತೆಯಲ್ಲಿ ಮೇಲು ಸೇತುವೆ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಸುಂಕೇರಿ ಕಡವಾಡ ರಸ್ತೆಯಲ್ಲಿ ಪರಿಷ್ಕೃತ ಅಂದಾಜಿನಂತೆ 13.37 ಕೋಟಿ ರೂ.ವೆಚ್ಚದಲ್ಲಿ ಮೇಲು ಸೇತುವೆ ನಿರ್ಮಿಸಲು ಮಂತ್ರಿಪರಿಷತ್ ಸಭೆ ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ನಗರದ ಹೆಬ್ಬಾಳ-ನಾಗವಾರ ಕಣಿವೆಯಲ್ಲಿನ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ 53 ಕೆರೆಗಳಿಗೆ ನೀರು ತುಂಬಿಸಲು ಏತ ನೀರಾವರಿ ಮೂಲಕ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಲು 883.54 ಕೋಟಿ ರೂ.ಯೋಜನೆಗೆ ಮಂತ್ರಿ ಪರಿಷತ್ ಅನುಮೋದನೆ ನೀಡಿದೆ ಎಂದು ಜಯಚಂದ್ರ ಹೇಳಿದರು.
ಪ್ರಸಕ್ತ ಸಾಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಕುರಿತಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಎರಡು-ಮೂರು ದಿನಗಳು ಕಾಲಾವಕಾಶ ಕೇಳಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳ ಅಹವಾಲುಗಳನ್ನು ಆಲಿಸಿದ ಬಳಿಕ ಸರಕಾರ ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದೆ ಎಂದು ಅವರು ತಿಳಿಸಿದರು.
ಮುಂದಿನ ವರ್ಷದಿಂದ ನೀಟ್ ಕಡ್ಡಾಯ
ಮುಂದಿನ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ( ನ್ಯಾಷನಲ್ ಎಲಿಜಿಬಿಲಿಟಿ ಅಂಡ್ ಎಂಟ್ರಾನ್ಸ್ ಟೆಸ್ಟ್-ನೀಟ್) ಕಡ್ಡಾಯ ಗೊಳಿಸಲು ರಾಜ್ಯ ಸರಕಾರ ಪ್ರಯತ್ನಿಸಲಿದೆ.
ಟಿ.ಬಿ.ಜಯಚಂದ್ರ, ಕಾನೂನು ಸಚಿವ