×
Ad

ಪಡುಬಿದ್ರೆ: ವಾಹನ ಢಿಕ್ಕಿಯಾಗಿ ಪಾದಚಾರಿ ಸಾವು

Update: 2016-06-15 21:26 IST

ಪಡುಬಿದ್ರೆ, ಜೂ.15: ಬಸ್‌ನಿಲ್ದಾಣದ ಬಳಿ ನಡೆದುಕೊಂಡು ಹೋಗುತ್ತಿದ್ದ ಲಾರಿಯ ಕ್ಲೀನರ್‌ಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಉಚ್ಚಿಲದಲ್ಲಿ ನಡೆದಿದೆ.

ಮೃತನನ್ನು ಬಳ್ಳಾರಿ ಕೂಡ್ಲಿಗೆ ನಿವಾಸಿ ಮಂಜುನಾಥ (25) ಎಂದು ಗುರುತಿಸಲಾಗಿದೆ.

ಬಳ್ಳಾರಿಯಿಂದ ಮಂಗಳೂರಿಗೆ ಬರುತ್ತಿದ್ದ ಲಾರಿಯನ್ನು ಉಚ್ಚಿಲದಲ್ಲಿ ನಿಲ್ಲಿಸಿ, ಊಟಕ್ಕೆ ತೆರಳುತ್ತಿದ್ದರು. ಈತ ಉಚ್ಚಿಲ ಬಸ್‌ನಿಲ್ದಾಣದ ಬಳಿ ನಡೆದುಕೊಂಡು ಹೋಗುತಿದ್ದಾಗ ಅತೀ ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆಯಿತು. ಈ ಬಗ್ಗೆ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News