ಸಭೆಯನ್ನು ಅರ್ಧದಲ್ಲೇ ಮೊಟಕುಗೊಳಿಸಿದ ಜಿಲ್ಲಾಧಿಕಾರಿಗಳು
Update: 2016-06-15 22:00 IST
ಮಂಗಳೂರು, ಜೂ.15: ತಣ್ಣೀರುಬಾವಿಯಲ್ಲಿ ಗಾಲ್ಫ್‌ಕೋರ್ಟ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇಂದು ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಪ್ರಗತಿಯಾಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಸಭೆಯನ್ನು ಅರ್ಧದಲ್ಲಿಯೆ ಮೊಟಕುಗೊಳಿಸಿದ ಘಟನೆ ನಡೆಯಿತು.
ತಣ್ಣೀರು ಬಾವಿಯಲ್ಲಿ ಗಾಲ್ಫ್‌ಕೋರ್ಸ್ ನಿರ್ಮಾಣಕ್ಕೆ ಸರಕಾರ 2 ವರ್ಷಗಳ ಹಿಂದೆ ಭೂಮಿಯನ್ನು ಹಸ್ತಾಂತರಿಸಿತ್ತು. 135 ಎಕರೆ ಭೂಮಿಯನ್ನು ಸರಕಾರ ಹಸ್ತಾಂತರಿಸಿದ್ದರೂ ಯೋಜನೆಯನ್ನು ನಿರ್ಮಾಣ ಮಾಡಬೇಕಾದ ಸಂಸ್ಥೆ ಕಾಮಗಾರಿಯನ್ನು ಇನ್ನು ಆರಂಭಿಸಿಲ್ಲ. ಈ ಬಗ್ಗೆ ಇಂದು ಪ್ರಗತಿ ಪರೀಶೀಲನಾ ಸಭೆ ನಡೆದಿದ್ದು ಈ ಸಭೆಯಲ್ಲಿ ಕಾಮಗಾರಿಯಲ್ಲಿ ಯಾವುದೇ ಪ್ರಗತಿ ಆಗದಿರುವ ಬಗ್ಗೆ ಅಸಮಾಧಾನಗೊಂಡ ಜಿಲ್ಲಾಧಿಕಾರಿಗಳು ಈ ಬಗ್ಗೆ ಶೋಕಾಸ್ ನೋಟೀಸ್ ನೀಡಲು ಆದೇಶಿಸಿ ಸಭೆಯನ್ನು ಅರ್ಧದಲ್ಲಿಯೆ ಮೊಟಕುಗೊಳಿಸಿ ಹೊರನಡೆದರು.
ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.