ಸಂಚಾರಿ ಪೊಲೀಸರಿಂದ 48 ವಾಹನಗಳ ತಪಾಸಣೆ
Update: 2016-06-15 22:02 IST
ಮಂಗಳೂರು, ಜೂ. 15: ಕಂಟೈನರ್ ಲಾರಿಗಳ ಹಾಗೂ ಟ್ರಕ್‌ಗಳ ಚಾಲಕರ ನಿರ್ಲಕ್ಷದಿಂದಾಗಿ ಇತ್ತೀಚೆಗೆ ಅಫಘಾತಗಳು ಹೆಚ್ಚುತ್ತಿರುವ ಬಗ್ಗೆ ಬಂದಿರುವ ದೂರಿನ ಹಿನ್ನೆಲೆಯಲ್ಲಿ ಸಂಚಾರ ಉಪವಿಭಾಗದ ಎಸಿಪಿ ಉದಯ್ ಎಂ.ನಾಯಕ್ ನೇತೃತ್ವದಲ್ಲಿ ಇಂದು ಸಂಚಾರಿ ಪೊಲೀಸರು ಹೆದ್ದಾರಿಯಲ್ಲಿ ಸಂಚರಿಸುವ ಕಂಟೈನರ್ ಲಾರಿಗಳು ಮತ್ತು ಟ್ರಕ್‌ಗಳ ತಪಾಸಣೆ ನಡೆಸಿದರು.
ಹೆದ್ದಾರಿಯಲ್ಲಿ ಸಂಚರಿಸುವ 48 ಕಂಟೈನರ್ ಹಾಗೂ ಟ್ರಕ್‌ಗಳನ್ನು ತಡೆದು ತಪಾಸಣೆ ನಡೆಸಿದ ಪೊಲೀಸರು ಚಾಲಕನ ಸುರಕ್ಷಾ ಚಾಲನೆ ಹಾಗೂ ವಾಹನದ ಬಾಡಿ ಲಾಕ್‌ಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಒಂದು ಕಂಟೈನರ್‌ನ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಇತ್ತೀಚೆಗೆ ವಳಚ್ಚಿಲ್ ಬಳಿ ಕಂಟೈನರ್ ಲಾರಿಯೊಂದು ಆಟೊ ರಿಕ್ಷಾ ಹಾಗೂ ಕಾರಿಗೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಐವರು ಮೃತಪಟ್ಟಿದ್ದರು. ಘಟನೆಯ ಬಳಿಕ ಕಂಟೈನರ್ ಹಾಗೂ ಟ್ರಕ್ ಚಾಲಕರ ನಿಲಕ್ಷದ ಬಗ್ಗೆ ಆರೋಪಗಳು ಕೇಳಿಬಂದಿದ್ದವು.