ಬೆಳ್ತಂಗಡಿ: 11 ಮರಳು ಸಾಗಾಟ ಲಾರಿಗಳು ವಶಕ್ಕೆ
Update: 2016-06-15 22:05 IST
ಬೆಳ್ತಂಗಡಿ, ಜೂ.15: ಅಕ್ರಮ ಮರಳು ಸಾಗಾಟವನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಬುಧವಾರ ಬೆಳಗ್ಗಿನಿಂದಲೇ ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಪ್ರಸನ್ನ ಮೂರ್ತಿ ಹಾಗೂ ಲೋಕೋಪಯೋಗಿ ಇಲಾಖೆಯ ಸ. ಕಾರ್ಯಪಾಲಕ ಇಂಜಿನಿಯರ್ ಶಿವಪ್ರಸಾದ್ ಅಜಿಲ ತಂಡದವರು 11 ಲಾರಿಗಳನ್ನು ತಡೆಹಿಡಿದು ವಶಕ್ಕೆ ತೆಗೆದುಕೊಂಡು ಕೇಸು ದಾಖಲಿಸಿಕೊಂಡಿದ್ದಾರೆ.